ಹುಬ್ಬಳ್ಳಿ-ಧಾರವಾಡದಲ್ಲಿ ವಿಕಲಚೇತನರ ಸ್ಥಿತಿ ಅಯೋಮಯ…!
1 min readಹುಬ್ಬಳ್ಳಿ: ಸರಕಾರದ ಸೌಲಭ್ಯಗಳನ್ನ ಪಡೆಯಲು ಸಾರ್ವಜನಿಕರು ಪರದಾಡಿದಾಗ ಪ್ರತಿಭಟನೆಗಳು ನಡೆಯುತ್ತವೆ. ತಕ್ಷಣವೇ ಸರಕಾರ ಎಚ್ಚೆತ್ತು ಕೆಲವೊಂದಿಷ್ಟು ಮಾರ್ಪಾಡು ಮಾಡುತ್ತವೆ. ಆದರೆ, ವಿಕಲಚೇತನರ ಬಗ್ಗೆ ಎಷ್ಟೊಂದು ತಾತ್ಸಾರ ಮನೋಭಾವನೆಯನ್ನ ಹೊಂದಲಾಗಿದೆ ಎನ್ನುವುದಕ್ಕೆ ಕೆಲವೊಂದಿಷ್ಟು ಘಟನೆಗಳು ಸಾಕ್ಷಿ ನುಡಿಯುತ್ತಿವೆ.
ಈಗಾಗಲೇ ವಿಕಲಚೇತನರಿಗೆ ನೀಡಿದ ಬಸ್ ಪಾಸ್ ಗಳು ಫೆಬ್ರುವರಿಗೆ ಅಂತ್ಯವಾಗುತ್ತಿವೆ. ಅವುಗಳನ್ನ ಮಾರ್ಚ ಅಂತ್ಯದವರೆಗೆ ಮುಂದುವರೆಸಿ ಎಂದು ಬೇಡಿಕೆಯಿಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿಯೇ ಬಸ್ ನಿಲ್ದಾಣಕ್ಕೆ ಹೋದರೇ, ಅವರಿಗೂ ಸರದಿ ಸಾಲು. ಕೂಡಲು ವ್ಯವಸ್ಥೆಯೂ ಇಲ್ಲದಂತಾಗಿದೆ.
ಕೇವಲ ಮಾತಿನಲ್ಲೇ ಕನಿಕರ ತೋರಿಸುವ ಅಧಿಕಾರಿಗಳು ವಿಕಲಚೇತನರ ತೊಂದರೆಯನ್ನ ನೋಡಬೇಕಿದೆ. ಅವರ ಬೇಡಿಕೆಯ ಹಾಗೇ, ಪಾಸ್ ನ್ನ ಮಾರ್ಚವರೆಗೆ ಮುಂದುವರೆಸುವ ಅವಶ್ಯಕತೆಯಿದೆ. ಅಷ್ಟೇ ಅಲ್ಲ, ಪಾಸ್ ಪಡೆದುಕೊಳ್ಳಲು ಬರುವವರಿಗೆ ಕೂಡುವ ವ್ಯವಸ್ಥೆಯನ್ನಾದರೂ ಮಾಡಬೇಕಿದೆ ಅಲ್ವೇ.
ವಾಯುವ್ಯ ರಸ್ತೆ ಸಾರಿಗೆ ಅಧಿಕಾರಿಗಳು ಇದನ್ನ ಗಮನದಲ್ಲಿಟ್ಟುಕೊಂಡು ಮಾಡಬೇಕಿದೆ. ಇಲ್ಲದಿದ್ದರೇ, ವಿಕಲಚೇತನರಿಗೆ ಮಾಡಿದ ಅನ್ಯಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.