ದಯವಿಟ್ಟು ಬೆರಳು ಜೋಡಿಸಿ.. ಡಬ್ಬಿಯಲ್ಲಿವೆ ನೋಡಿ.. ನಾಗಪ್ಪ ಕಿಮ್ಸನಲ್ಲಿ ರೋಧಿಸುತ್ತಿದ್ದಾನೆ..!
1 min readಹುಬ್ಬಳ್ಳಿ: ಕಾಂಕ್ರೀಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಬೆರಳುಗಳು ಕಟ್ ಆದ ಹಿನ್ನೆಲೆಯಲ್ಲಿ ಬೆರಳುಗಳನ್ನ ಜೋಡಿಸಬಹುದೆಂಬ ನಂಬಿಕೆಯಿಂದ ಹುಬ್ಬಳ್ಳಿಯ ಕಿಮ್ಸಗೆ ವ್ಯಕ್ತಿಯೋರ್ವ ಚಿಕಿತ್ಸೆಗಾಗಿ ದಾಖಲಾದ ಘಟನೆ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಾಲಗಿ ಮರೋಳ ಗ್ರಾಮದಲ್ಲಿ ಕೆಲಸ ಮಾಡುವಾಗ ಈ ದುರ್ಘಟನೆ ನಡೆದಿದ್ದು, ನಾಗಪ್ಪ ಎಂಬಾತ ತನ್ನ ಬೆರಳುಗಳೊಂದಿಗೆ ಕಿಮ್ಸಗೆ ಆಗಮಿಸಿದ್ದಾನೆ.
ಕಟ್ಟಡ ನಿರ್ಮಾಣ ಮಾಡುವಾಗ ಅವಘಡ ಸಂಭವಿಸಿದೆ. ತಕ್ಷಣವೇ ಜೊತೆಗಿದ್ದ ಕೆಲಸಗಾರರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಿದ್ದಾರೆ. ಇದೇ ಸಮಯದಲ್ಲಿ ನಾಗಪ್ಪ ತನ್ನ ಕಟ್ ಆಗಿರುವ ಬೆರಳುಗಳನ್ನ ಡಬ್ಬಿಯಲ್ಲಿ ಹಾಕಿಕೊಂಡು ಬಂದು, ವೈದ್ಯರಿಗೆ ಬೆರಳು ಜೋಡಿಸಿ ಎಂದು ಅಲವತ್ತುಕೊಳ್ಳುತ್ತಿದ್ದ.
ಬೆರಳುಗಳನ್ನ ಜೋಡಿಸಲು ಆಗುವುದಿಲ್ಲವೆಂದ ವೈಧ್ಯರು, ಕೈಗೆ ಚಿಕಿತ್ಸೆಯನ್ನ ನೀಡಿದ್ದು, ನಾಗಪ್ಪ ಬೆರಳುಗಳು ಕಟ್ ಆದ ನೋವಿನಿಂದ ಬಳಲುತ್ತಿದ್ದಾನೆ. ಜೀವನಕ್ಕೆ ಕೆಲಸವೇ ಆದಾರವಾಗಿದ್ದ ನಾಗಪ್ಪನ, ಬೆರಳುಗಳು ಕಟ್ ಆಗಿರುವುದು ಮತ್ತಷ್ಟು ಕಷ್ಟವಾಗಲಿದೆ.