ಕುರಿಗಾಯಿಯ ಜಾಗೃತಿ ಗೀತೆ

ಗದಗ: ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವರು ತಮ್ಮದೇ ಆದ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಅದೇ ರೀತಿ ಗದಗ ಜಿಲ್ಲೆಯ ಕುರಿಗಾಯಿ ಹನಮಂತಪ್ಪ ಬಟ್ಟೂರ ತನ್ನದೇ ಶೈಲಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.
ಕುರಿ ಕಾಯುತ್ತಲೇ ಸೆಲ್ಪಿ ವೀಡೀಯೋ ಮಾಡಿ ರಾತ್ರೋರಾತ್ರಿ ಫೇಮಸ್ಸಾಗಿದ್ದ ಲಕ್ಷ್ಮೇಶ್ವರದ ಹನಮಂತಪ್ಪ ಬಟ್ಟೂರ ಒಳ್ಳೆಯ ಹಾಡುಗಾರ. ಹೀಗಾಗಿಯೇ ತನ್ನದೇ ಶೈಲಿಯಲ್ಲಿ ಹಾಡು ಬರೆದಿರುವ ಈತ, ಸರಕಾರದ ಆದೇಶ ಪಾಲಿಸಿ ಮನೆಯಲ್ಲೇ ಇರಿ ಎಂದು ಬೇಡಿಕೊಂಡಿದ್ದಾನೆ.
ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಹನಮಂತಪ್ಪನ ಕಾಳಜಿಯನ್ನ ಸಾರ್ವಜನಿಕರು ನೆನದಿದ್ದಾರೆ.