ನಿಧಿ ಆಸೆಗಾಗಿ ನಡೆಯುತ್ತಿದೆ ನಿರಂತರ ದುಷ್ಕೃತ್ಯ: ಹಾಳಾಗುತ್ತಿದೆ ಹಂಪೆಯ ಸೊಬಗು
1 min readಬಳ್ಳಾರಿ: ವಿಶ್ವವಿಖ್ಯಾತ ಹಂಪೆಯಲ್ಲಿ ಕಿಡಿಗೇಡಿಗಳಿಂದ ನಿಧಿದಾಗಿ ಉಪಟಳ ಹೆಚ್ಚಾಗುತ್ತಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ದುಷ್ಕರ್ಮಿಗಳ ದುಷ್ಕೃತ್ಯ ಹೆಚ್ಚುತ್ತಿದ್ದರೂ, ವಿಶ್ವಪಾರಂಪರಿಕ ತಾಣ ಹಂಪೆಯನ್ನ ರಕ್ಷಿಸುವಲ್ಲಿ ಎಡವುತ್ತಿದೆಯಾ..? ಪುರಾತತ್ವ ಇಲಾಖೆ ಎಂಬ ಸಂಶಯ ಮೂಡಿದೆ.
ಕಿಡಿಗೇಡಿಗಳಿಂದ ಪದೇ ಪದೇ ಹಂಪೆಯ ಪರಂಪರೆಗೆ ಧಕ್ಕೆ ತರುವ ಯತ್ನ ನಡೆಯುತ್ತಿದೆ. ಬಳ್ಳಾರಿ (ಜಿ) ಹೊಸಪೇಟೆ (ತಾ) ಕಮಲಾಪುರ ಹತ್ತಿರದ ಪೆನ್ನಗೊಂಡ ಕೋಟೆ ಮೇಲೆ ದುಷ್ಕರ್ಮಿಗಳ ವಿಕೃತ ಕಾರ್ಯ ನಡೆಯುತ್ತಿದೆ. ಹಂಪಿಯ ಅನತಿ ದೂರದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕುರುಹುವಾಗಿರುವ ರಘುನಾಥ್ ದೇವಸ್ಥಾನದ ಬಳಿ ಇರೋ ಪೆನ್ನಗೊಂಡ ಕೋಟೆಯನ್ನ ಧ್ವಂಸಗೊಳಿಸಲು ವಿಧ್ವಂಸಕರು ಯತ್ನಿಸಿದ್ದಾರೆ. ನಿಧಿಗಳ್ಳರು, ಕಿಡಿಗೇಡಿಗಳ ವಿಪರೀತ ಉಪಟಳದಿಂದ ಹಂಪೆಯ ಪಾರಂಪರಿಕತೆಗೆ ಧಕ್ಕೆಯಾಗುತ್ತಿದೆ.
ಘಟನೆಯಾಗಿ ಒಂದು ವಾರವಾದರೂ ಕಣ್ಮುಚ್ಚಿ ಕುಳಿತಿದೆ ಪುರಾತತ್ವ ಇಲಾಖೆ. ಯುನೆಸ್ಕೋ ಪಟ್ಟಿಯಲ್ಲಿರುವ ವಿಶ್ವದ ಅತಿದೊಡ್ಡ ಶ್ರೀಮಂತ ಸಾಮ್ರಾಜ್ಯದ ಪಳೆಯುಳಿಕೆ ಹಂಪೆ.