Posts Slider

Karnataka Voice

Latest Kannada News

ರೇಲ್ವೆ ನೌಕರನ ಮೇಲೆ ಚಾಕು ಇರಿತ: ಸ್ಕೆಚ್ ಪರಶು ಸೇರಿದಂತೆ ಮೂವರು ಅಂದರ್…!

1 min read
Spread the love

ಹುಬ್ಬಳ್ಳಿ: ನಗರದ ಗದಗ ರಸ್ತೆಯಲ್ಲಿರುವ ರೇಲ್ವೆ ವರ್ಕಶಾಫ್ ನ ಪಾರ್ಕಿಂಗ್ ಸ್ಥಳದಲ್ಲಿ ರೇಲ್ವೆ ನೌಕರನಿಗೆ ಚಾಕು ಹಾಕಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನ ಬಂಧನ ಮಾಡುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸ್ಕೆಚ್ ಪರಶು ಎಂಬಾತ ರೇಲ್ವೆ ನೌಕರನೂ ಆಗಿರುವ ಸಂಘದ ಚಂದ್ರಶೇಖರ ನಾಯ್ಡು ಎಂಬುವವರ ಮಗಳನ್ನ ಪ್ರೀತಿಸಿ, ಮದುವೆಯಾಗಲು ಮುಂದಾಗಿದ್ದ. ಇದೇ ಸಮಯದಲ್ಲಿ ಪರಶುಗೆ ನಾಯ್ಡು ಕಡೆಯವರು ಚಾಕು ಹಾಕಿದ್ದರು.

ಈ ಪ್ರಕರಣವನ್ನ ಕಳೆದ ಕೆಲವು ದಿನಗಳ ಹಿಂದಷ್ಟೇ ರಾಜಿ ಮಾಡಿಕೊಂಡು ಸುಮ್ಮನಾಗಿದ್ದರು. ಆದರೆ, ಮತ್ತೆ ಮದುವೆ ಮಾತು ಕೇಳಿದ ನಂತರ ನಾಯ್ಡು ಕುಟುಂಬದವರು ಪರಶುಗೆ ಹೊಡೆಯುವ ಮಾತುಗಳನ್ನ ಆಡಿದ್ದಾರೆ.

ಅದೇ ಕಾರಣದಿಂದಲೇ ಪರಶು ತನ್ನ ಗೆಳೆಯರೊಂದಿಗೆ ಕೂಡಿಕೊಂಡು ಚಂದ್ರಶೇಖರ ನಾಯ್ಡು ಮೇಲೆ ಹಲ್ಲೆ ಮಾಡಿದ್ದಾನೆಂದು ಗೊತ್ತಾಗಿದೆ.

ಪೊಲೀಸರು ಪರಶು, ಪುನೀತ ಹಾಗೂ ಓರ್ವ ಬಾಲಪರಾಧಿಯನ್ನ ಬಂಧನ ಮಾಡಲಾಗಿದ್ದು, ಪೊಲೀಸರು ಮತ್ತಷ್ಟು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *