ಕಟ್ಟಿಂಗ್ ಮಾಡಿಸಿಕೊಂಡವರನ್ನ ಹುಡುಕುತ್ತಿರುವ ನಗರಸಭೆ: ಸಲೂನ್ ತಂದ ಆವಾಂತರ
1 min readಕೋಲಾರ: ಸಲೂನ್ ಶಾಪ್ ನಲ್ಲಿ ಕಟ್ಟಿಂಗ್ ಮಾಡಿಸಿಕೊಂಡವರಿಗೆ ಕೊರೊನಾ ಭೀತಿ ಎದುರಾಗಿರುವ ಪ್ರಕರಣ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಬಂಗಾರಪೇಟೆ ಮೂಲದ ವ್ಯಕ್ತಿಗೆ ಬೆಂಗಳೂರಲ್ಲಿ ಕೊರೋನಾ ದೃಡವಾಗಿದ್ದು, P 3186 ವ್ಯಕ್ತಿಯಾಗಿದ್ದಾನೆ. ಮಲೇಶಿಯಾದಿಂದ ವಾಪಾಸ್ ಆಗಿದ್ದ ವ್ಯಕ್ತಿ, ಬೆಂಗಳೂರಲ್ಲಿ ಕೊರೋನಾ ಪರೀಕ್ಷೆಗೆ ಒಳಗಾಗಿ ನೆನ್ನೆ ಸಂಜೆ ಬಂಗಾರಪೇಟೆ ನಿವಾಸಕ್ಕೆ ಬಂದಿದ್ದರು. ಭಾನುವಾರ ಬೆಳಗ್ಗೆ ಸಲೂನ್ ಶಾಪ್ ಗೆ ಹೋಗಿ ಕಟ್ಟಿಂಗ್ ಮಾಡಿಸಿಕೊಂಡಿದ್ದ. ಸೋಂಕು ದೃಡ ಹಿನ್ನಲೆ ಇಂದು ಬೆಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಲೂನ್ ಶಾಪ್ ಗೆ ಹೋಗಿದ್ದವರು ಕೊರೋನಾ ಪರೀಕ್ಷೆಗೆ ಒಳಗಾಗಿ ಎಂದು ಸ್ಥಳೀಯ ಪುರಸಭೆ ಸದಸ್ಯನಿಂದ ಮೈಕ್ ನಲ್ಲಿ ಮಾಹಿತಿ ರವಾನೆ ಮಾಡುವ ಸ್ಥಿತಿ ಬಂದೊದಗಿದೆ. ಬಂಗಾರಪೇಟೆ ನಗರದ ವಿವೇಕಾನಂದ ನಗರ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಇದೀಗ ಸಲೂನ್ ಶಾಪ್ ಗೆ ಹೋದವರಿಗೆ ಕೊರೊನಾ ಭೀತಿ ಎದುರಾಗಿದೆ. ಅಧಿಕಾರಿಗಳು, ಈಗಾಗಲೇ ಸಲೂನ್ ಶಾಪ್ ನಡೆಸುತ್ತಿದ್ದ ವ್ಯಕ್ತಿಯನ್ನ ಆಸ್ಪತ್ರೆ ಕ್ವಾರೆಂಟೈನ್ ಮಾಡಿದ್ದಾರೆ.