Posts Slider

Karnataka Voice

Latest Kannada News

ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ “ಹಚ್ಚೆ” ಚಿತ್ರ ಆಗಸ್ಟ್ 22ರಂದು ತೆರೆಗೆ

Spread the love

ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಅವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ, ಅಭಿಮನ್ಯು ನಾಯಕನಾಗಿ ನಟಿಸಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಹಚ್ಚೆ” ಚಿತ್ರದ ಟ್ರೇಲರ್ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಿಂದಲೇ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ 22 ರಂದು ಬಿಡುಗಡೆಯಾಗಲಿದೆ.

ಅಭಿಮನ್ಯು ಅವರಿಗೆ ನಾಯಕಿಯಾಗಿ ಅದ್ಯಾ ಪ್ರಿಯಾ ನಟಿಸಿದ್ದಾರೆ. ಅನುಪ್ರೇಮ, ಗುರುರಾಜ್ ಹೊಸಕೋಟೆ, ದುಷ್ಯಂತ್, ಶ್ರೀಮಂತ್ ಸುರೇಶ್, ಚಂದ್ರು ಬಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

“ಹಚ್ಚೆ” ಚಿತ್ರಕ್ಕೆ ಇತಿಹಾಸದ ಶಕ್ತಿ ಎಂಬ ಅಡಿಬರಹವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕರ್ನಾಟಕದ ಸುಂದರ ಸ್ಥಳಗಳಲ್ಲಿ 50 ದಿನಗಳ ಚಿತ್ರೀಕರಣ ನಡೆದಿದೆ.

ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಯಾಸಿನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಟೀಸರ್ ಹಾಗೂ ಟ್ರೇಲರ್ ಈಗಾಗಲೇ ಜನಪ್ರಿಯವಾಗಿದೆ.


Spread the love

Leave a Reply

Your email address will not be published. Required fields are marked *