ವೀರಶೈವ ಮಹಾಸಭಾ ಚುನಾವಣೆ: ಗುರುರಾಜ ಹುಣಸಿಮರದರಿಗೆ ವಿರೋಚಿತ ಸೋಲು…!!! ಮಹಿಳಾ ಸ್ಥಾನಗಳಲ್ಲಿ 50:50…!!!!

ಧಾರವಾಡ: ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಗುರುರಾಜ ಹುಣಸಿಮರದ ಸೋಲು ಅನುಭವಿಸಿದ್ದು, ತೀರಾ ಕಡಿಮೆ ಅಂತರದಲ್ಲಿದೆ ಎಂದು ಗೊತ್ತಾಗಿದೆ.
ಬೆಳಗಿನ ಜಾವದವರೆಗೆ ನಡೆದ ಮತ ಎಣಿಕೆಯಲ್ಲಿ ಸುಮಾರು ಐವತ್ತರಿಂದ ಅರವತ್ತು ಮತಗಳ ಅಂತರವಷ್ಟೇ ಇದೆ ಎನ್ನಲಾಗಿದ್ದು, ಸೋಲಿನ ಅಂತರದ ನಿಖರತೆ ಸಿಗಬೇಕಿದೆ.
ಕೆಲವು ಸ್ಥಾನಗಳ ಮತ ಎಣಿಕೆ ಇಂದು ಕೂಡಾ ಮುಂದುವರೆಯಲಿದೆ. ಮಹಿಳಾ ಸ್ಥಾನಗಳ ಪೈಕಿ ಎರಡು ಗುಂಪುಗಳ ಐದೈದು ಮಹಿಳೆಯರು ಜಯಗಳಿಸಿರುವುದು ಗೊತ್ತಾಗಿದೆ.
ಗುರುರಾಜ ಹುಣಸಿಮರದ ಅವರನ್ನ ಪ್ರದೀಪಗೌಡ ಪಾಟೀಲ ಸೋಲಿಸಿದ್ದು, ಧಾರವಾಡ-71 ಹಾಗೂ 74 ಮತ ಕ್ಷೇತ್ರದ ಹಾಲಿ ಶಾಸಕರು ಇವರಿಗೆ ಬೆಂಬಲಿಸಿದ್ದರು.