Posts Slider

Karnataka Voice

Latest Kannada News

ವಿನಯ ಕುಲಕರ್ಣಿ ಬೇಲ್ ಕ್ಯಾನ್ಸಲ್ ಮಾಡಲು ಕೋರ್ಟಗೆ: “ಜಂಟಿ ಟಾಕ್”…

1 min read
Spread the love

ಧಾರವಾಡ: ಹುಟ್ಟುಹಬ್ಬ ಆಚರಣೆಯನ್ನ ಮಾಡುವ ಮೂಲಕ ಸಾಕ್ಷ್ಯ ನಾಶ ಮಾಡುವ ಷಡ್ಯಂತ್ರ ರೂಪಿಸಲಾಗುತ್ತಿದ್ದು, ಹೀಗಾಗಿ ಮಾಜಿ ಸಚಿವರ ಜಾಮೀನು ರದ್ದು ಮಾಡುವಂತೆ ಕೋರ್ಟಗೆ ಹೋಗಲಾಗುವುದೆಂದು ಜನಜಾಗೃತಿ ಸಂಘದ ಬಸವರಾಜ ಕೊರವರ ಹಾಗೂ ಬಿಜೆಪಿ ಮುಖಂಡ ಗುರುನಾಥಗೌಡ ಗೌಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವೀಡಿಯೋ ಇಲ್ಲಿದೆ ನೋಡಿ..

ಪತ್ರಿಕಾಗೋಷ್ಠಿಯ ಪೂರ್ಣ ವಿವರ….

ಧಾರವಾಡ ಜಿಪಂ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣ ಇವತ್ತಿಗೂ ನ್ಯಾಯಾಲಯದಲ್ಲಿ

ವಿಚಾರಣೆ ಹಂತದಲ್ಲಿದೆ.

ಈ ಪ್ರಕರಣ ಧಾರವಾಡ ಜಿಲ್ಲೆಯ ನ್ಯಾಯಾಲಯದಿಂದ ಹಿಡಿದು ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ವರೆಗೆ ಹೋಯಿತು.

ನಾವು ಆರಂಭದಿಂದ ಇದು ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಲಾಭಕ್ಕಾಗಿ ನಡೆದ ಕೊಲೆ ಎಂದು ಹೇಳುತ್ತಲೇ ಬಂದಿವೆ, ಅದು ಪ್ರಕರಣ ಸಿಬಿಐ ತನಿಖೆ ನಡೆಸಲು ಸಿದ್ದರಾಮಯ್ಯ ಸರಕಾರದಿಂದ ಹಿಡಿದು ಯಡಿಯೂರಪ್ಪ ಸರಕಾರದ ವರೆಗೆ ಹೋರಾಟ ನಡೆಸಿದವು. ಅದರಂತ ಅವರು ಪ್ರಕರಣ ಸಿಬಿಐ ತನಿಖೆ ನಡೆಸಲು ಕೊಟ್ಟರೂ ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡ ಪ್ರಕರಣ ಕುರಿತು ಎಳೆ ಎಳೆಯಾಗಿ ತನಿಖೆ ನಡೆಸಿದ ಪರಿಣಾಮ ಅನೇಕ ಸತ್ಯ ಹೊರಬಂದಿವೆ, ನೂರಾರು ಪೊಲೀಸರು, ಅಧಿಕಾರಿಗಳಿಂದ ಮಾಹಿತಿಯನ್ನು ಕಲೆಹಾಕಿ ಸೃಜ ಆರೋಪಿಗಳನ್ನು ಹಿಡಿದು ಜೈಲಿಗೆ ಹಾಕಿದರು, ಎಸಿಪಿ, ಡಿಸಿಪಿ, ಪೊಲೀಸ್‌ ಆಯುಕ್ತ, ಅಂದಿನ ಗೃಹ ಸಚಿವರ ವರೆಗೆ ಹಲವರ ವಿಚಾರಣೆ ನಡೆಸಿದರು. ನ್ಯಾಯಾಲಯದ ಮುಂದ ಅನೇಕರ 164 ಹೇಳಿಕ ದಾಖಲಿಸಿದ್ದಾರೆ. ಸ್ವತಃ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರ ಅಂತ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಸಿಬಿಐ ಪರ ವಕೀಲರ ವಾದ- ಪ್ರತಿವಾದ ಆಲಿಸಿದ ಮೇಲೆಯೇ ಇಂತಹ ಮಹತ್ವದ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್ ನಡೆಯನ್ನು ಇವರು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ಮೂಲಕ ಜಿಲ್ಲೆಯ, ರಾಜ್ಯದ ಜನರ, ವಿಶೇಷವಾಗಿ ನಾಡಿನ ಪ್ರತಿಷ್ಠಿತ ಮಠಾಧೀಶರ, ನಟರ ಬಳಸಿಕೊಂಡು ಅವರ ಮೂಲಕ ಪ್ರಭಾವ ಬೀರಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಈಗಾಗಲೇ ಅವರ ಮೇಲೆ ಸಿಬಿಐ ಅಧಿಕಾರಿಗಳು ಕೊಲೆ ಆರೋಪ ಕುರಿತು ಹಾಗೂ ಸಾಕ್ಷ್ಯ ನಾಶ ಆರೋಪದ ಕುರಿತು ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಸಿಬಿಐ ತನಿಖೆ ನಡೆದಾಗ ಪ್ರಕರಣದ ಇಂಚಿಚು ಮಾಹಿತಿ ಮಾಧ್ಯಮದ ಮೂಲಕ ರಾಜ್ಯವಷ್ಟೇ ಅಲ್ಲ, ದೇಶದ ಜನರ ಎದುರು ಬಹಿರಂಗಗೊಂಡಿದೆ. ಆಗಿದ್ದರೂ ಕೂಡ

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯ ಲಾಭಕ್ಕಾಗಿ ಎಲ್ಲರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ಹೇಳುವುದು ಎಲ್ಲೋ ಒಂದು ಕಡೆ ತಪ್ಪಾಗುತ್ತದೆ. ಎರಡು ಬೊಟ್ಟು ಬೇರೆಯವರ ಕಡೆ ಮಾಡಿದರೆ ಮೂರು ಬೊಟ್ಟು ಅವರ | ಕಡೆ ಇರುತ್ತಾವ ಎನ್ನುವುದು ಅವರುಮರೆಯಬಾರದು. ಇದು ಹೇಗಾಗಿದೆ ಎಂದರೆ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಕೆಲವರು ಮೌನಕ್ಕೆ ಶರಣಾಗಿದ್ದಾರೆ. ನೀನು ಅತ್ತಂಗ ಮಾಡು ನಾನು ಕರೆದಂಗ ಮಾಡ್ತಿನಿ ಅಂತ ರಾಜಕೀಯ ದಾಳ ಉದುರಿಸುತ್ತಿದ್ದಾರೆ. ಆದರೆ

ಬಡವರ ಮಕ್ಕಳು ಮಾತ್ರ ಬಡಿದಾಡಿಕೊಳ್ಳುವಂತಾಗಿದೆ.. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಹಣ ಬಲ, ಹೋಳ್ಳಲ, ಅಧಿಕಾರ ಬಲ ಇದ್ದವರು ಏನೂ ಮಾಡಿದರೂ ನಡೆಯುತ್ತದೆ ಎಂಬಂತಾಗಿದೆ, ನಮ್ಮೊಂದಿಗೆ ಅವರು ಅದಾರ) ಇವರು ಅದಾರ ಅಂತ ತೋರಿಸಿಕೊಳ್ಳೋ ಪೈಪೋಟಿ ಗೆ ಬಿದ್ದು ಜನುಮ ದಿನದ ಹೆಸರಿನಲ್ಲಿ ಶಕ್ತಿ ಪ್ರದರ್ಶನದ ವೇದಿಕೆಗಳಾಗುತ್ತಿವೆ.

ಅದರಲ್ಲಿ ಸಮಾಜದ ಗಣ್ಯರು, ಸ್ವಾಮೀಜಿಗಳು, ಭಾಗವಹಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸುವ ಮೂಲಕ ಕನಿಷ್ಠ ಮಾನವೀಯತೆಯ ಮೌಲ್ಯವನ್ನು ಕಡೆ ಗಣಿಸಿ ಸಾವಿನ ಪರ ಯಾರೊಬ್ಬರು ಧ್ವನಿ ಎತ್ತಲಿಲ್ಲ. ಅವರು ಕೂಡ ಅದೇ ಪ್ರಬಲ ಲಿಂಗಾಯತ ಸಮಾಜಕ್ಕೆ ಸೇರಿದವರು. ಇದೇ ಪಂಚಮಸಾಲಿ ಸಮಾಜದ ಕೂಡಲಸಂಗಮ ಸ್ವಾಮೀಜಿಯ ಜೊತೆಗೆ ಯೋಗೀಶಗೌಡ ಓಡಾಡಿದವರು, ಅವರಿದ್ದಾಗ ಅನೇಕಬಾರಿ ಮನೆಗೆ ಬಂದು ಹೋದವರು. ಕನಿಷ್ಠ ಸೌಜನ್ಯಕ್ಕಾದರೂ

ಸಾವಿಗೆ ನ್ಯಾಯ ಸಿಗಲಿ ಅಂತ ಹೇಳಲಿಲ್ಲ. ಮುರುಘಾಮಠದ ಸ್ವಾಮಿಗಳು ಸೇರಿದಂತೆ ಅನೇಕಮಠ ಮಾನ್ಯರ ಮೇಲೆ ನಮಗೆ ಅಪಾರ ಗೌರವವಿದೆ, ಆದರೆ ಅವರು ನಡೆದುಕೊಳ್ಳುವ ರೀತಿ ಸರಿಯಿಲ್ಲ ಎಂಬ ನೋವು ನನಗೆ ಕಾಡುತ್ತಿದೆ. ಆದರೆ ತಮ್ಮ ಸ್ವಾರ್ಥ ಕ್ಕಾಗಿ ಇದನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಯಾರಿಗೂ ಶೋಭೆ ಕೊಡಲ್ಲ ಎಂಬುದು ಯಾರು ಮರೆಯಬಾರದು.


Spread the love

Leave a Reply

Your email address will not be published. Required fields are marked *

You may have missed