ಹ್ಯಾಟ್ರಿಕ್ ಅಧ್ಯಕ್ಷ ಗುರಿಕಾರವರೇ ನೀವೂ ಹಿಂಗೇಕೆ: ನಿಮಗೂ “ಅನ್ಯಾಯ” ಮಾತಿಗೂ ಸಂಬಂಧವುಂಟಾ..?
ಧಾರವಾಡ: ಈ ವರ್ಷದ ರಾಷ್ಟ್ರಮಟ್ಟದ ಶಿಕ್ಷಣ ಇಲಾಖೆಯ ಪ್ರಶಸ್ತಿಯಲ್ಲೇ ಒಬ್ಬೇ ಒಬ್ಬ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಪ್ರಶಸ್ತಿ ಲಭಿಸದೇ ಇರುವುದು ಕರ್ನಾಟಕದ ಲಕ್ಷಾಂತರ ಶಿಕ್ಷಕರಿಗೆ ನೋವನ್ನುಂಟು ಮಾಡಿದ್ದು, ಎಷ್ಟು ಬೇಸರವಾಗಿದೇಯೋ ಅಷ್ಟೇ ಬೇಸರ, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಹೇಳಿಕೆಯಿಂದ ಆಗಿದೆ ಎಂಬ ಹೇಳಿಕೆಗಳು ಶಿಕ್ಷಕ ವಲಯದ ಸಾಮಾಜಿ ಜಾಲತಾಣದಲ್ಲಿ ತೀವ್ರ ವೈರಲ್ ಆಗಿವೆ.
ಆ ವೈರಲ್ ಆಗಿರುವ ಕೆಲವು ಶಬ್ದಗಳನ್ನ ಇಲ್ಲಿ ನಮೂದು ಮಾಡಲಾಗುತ್ತಿದೆ ನೋಡಿ ಬಸವರಾಜ ಗುರಿಕಾರವರೇ..!
ರಾಜ್ಯದ 1 ಲಕ್ಷ 68 ಸಾವಿರದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರತಿನಿಧಿಸುವಂತಹ ಬಲಾಢ್ಯ ಶಿಕ್ಷಕರ ಸಂಘವಿದ್ದು ಆ ಸಂಘಕ್ಕೆ ಎರಡು ಇನ್ನೋವ್ವಾ ಗೂಟದ ಕಾರುಗಳಿದ್ದು ಸಂಘಟನೆಯ ಮೇಲಿನ ನಂಬಿಕೆಯಿಂದ ಲಕ್ಷ -ಲಕ್ಷ ಆಧಾರ ರಹಿತ ಸಾಲ ಕೊಡುವವರಿದ್ದು, ರಾಷ್ಟ್ರೀಯ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯೊಂದಿಗೆ ಸಂಯೋಜನೆ ಹೊಂದಿದ್ದು , ಎಸ್ ಎಸ್ ಎ / ಡಿ.ಎಸ್.ಆರ್.ಟಿ ಇ & ಎ.ಐ.ಪಿ.ಟಿ.ಎಫ್ ನಿಂದ ಅನುದಾನ ಪಡೆದು ಶಿಕ್ಷಕರಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನಾ ಕೌಶಲ್ಯ ಹೆಚ್ಚಿಸವಂತಹ ತರಬೇತಿ ನೀಡಿ ರಾಜ್ಯ & ರಾಷ್ಟ್ & ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆ ಹೆಸರುವಾಸಿಯಾಗಿದ್ದು, ರಾಜ್ಯದ 1 ಲಕ್ಷ 68 ಸಾವಿರದ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ 2020 ನೇ ಸಾಲಿನಲ್ಲಿ ಒಂದೇ ಒಂದು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ದೊರೆಯದೇ ಇರುವುದು ದುರಾದೃಷ್ಟಕರ.
ಶಿಕ್ಷಕರ ಸಂಘಟನೆಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಬಲಾಢ್ಯ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿಗಳು..!
ಇವರು ನಮ್ಮ ರಾಷ್ಟ್ರೀಯ ಉಪಾಧ್ಯಕ್ಷರು.. ಇವಾಗ ಅನ್ಯಾಯ ಆಗಿದೆ ಅಂತಾರೆ.. ಇವರು ನಿಜವಾಗಿಯೂ ಧಾರವಾಡದಲ್ಲಿ ಎಷ್ಟು ಜನ ಸಾಮಾನ್ಯ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಕೊಡಿಸಿದ್ದಾರೆ. ಅದನ್ನು ಹೇಳಲಿ. ಅಲ್ಲದೇ, ರಾಷ್ಟ್ರಪ್ರಶಸ್ತಿ ಹಾಕರಿ ಅಂತಾ ಯಾರಿಗೂ ಹೇಳಲಿಲ್ಲ. ಅರ್ಹ ಶಿಕ್ಷಕರನ್ನು ಗುರುತಿಸಿ ಸಂಘದಿಂದಲೇ ಪ್ರಶಸ್ತಿಗೆ ಸಲ್ಲಿಸಲು ಯಾವಾಗ ಮಾರ್ಗದರ್ಶನ ಮಾಡಿದ್ದಾರೆ ಹೇಳಿ.
ಇವರು ನಮ್ಮ ರಾಷ್ಟ್ರೀಯ ಉಪಾಧ್ಯಕ್ಷರು,, ಧ್ವಜಾರೋಹಣ ಮಾಡಲು ಶಿಕ್ಷಕ ಸಂಘಟನೆಯವರಿಗೆ ಒಂದು ಸ್ವಂತ ಕಟ್ಟಡವಿಲ್ಲ ಧಾರವಾಡದಲ್ಲಿ, ಅದು ಹ್ಯಾಟ್ರಿಕ್ ರಾಜ್ಯಾಧ್ಯಕ್ಷರಾಗಿ…