ಅಲ್ತಾಫ-ದದ್ದಾಫುರಿಯನ್ನ ಕೂಡಿ ಹಾಕಿ ನನ್ನ ಉಚ್ಚಾಟನೆ: ವಿಜಯ ಗುಂಟ್ರಾಳ

ಹುಬ್ಬಳ್ಳಿ: ಕಳೆದ ಏಳು ವರ್ಷಗಳಿಂದ ಮಾದಿಗ ಸಮಾಜವನ್ನ ತುಳಿಯುವ ಪ್ರಯತ್ನವನ್ನ ಶಾಸಕ ಪ್ರಸಾದ ಅಬ್ಬಯ್ಯ ಮಾಡಿಕೊಂಡು ಬರುತ್ತಿದ್ದಾರೆ. ಉಚ್ಚಾಟನೆ ಅದರ ಮುಂದಿನ ಭಾಗವಷ್ಟೇ. ಇವರು ನನ್ನ ಉಚ್ಚಾಟನೆ ಮಾಡಲು ಬರುವುದೇ ಇಲ್ಲ ಎಂದು ಕಾಂಗ್ರೆಸ್ ಕಾರ್ಮಿಕ ಸಮಿತಿಯ ಉಚ್ಚಾಟಿತ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು.
ತಮ್ಮನ್ನ ಮಹಾನಗರ ಕಾಂಗ್ರೆಸ್ ಉಚ್ಚಾಟನೆ ಮಾಡಿದೆಯಲ್ಲಾ, ನಿಮ್ಮ ಅಭಿಪ್ರಾಯ ತಿಳಿಸಿ ಅಂದಾಗ ವಿಜಯ ಗುಂಟ್ರಾಳ ಹೇಳಿದ್ದೀಷ್ಟು:
ಪ್ರಸಾದ ಅಬ್ಬಯ್ಯ ಎರಡು ಬಾರಿ ಶಾಸಕರಾಗಬೇಕಾದರೇ ಕಾರ್ಮಿಕರು ಮತ ಹಾಕಿದ್ದಾರೆ. ಅವರ ಪರವಾಗಿ ಇರುವ ಬದಲು ಬಂಡವಾಳಶಾಹಿಗಳ ಪರವಾಗಿ ಶಾಸಕರು ಇದ್ದಾರೆ. ಅಲ್ತಾಪ ಹಳ್ಳೂರ ಮತ್ತು ರಾಬರ್ಟ್ ದದ್ದಾಪುರಿಯವರನ್ನ ಮನೆಯಲ್ಲಿ ಕೂಡಿ ಹಾಕಿ ನನ್ನ ಅಮಾನತ್ತು ಪತ್ರವನ್ನ ಬರೆಸಿಕೊಳ್ಳಲಾಗಿದೆ.
ನನ್ನ ಉಚ್ಚಾಟನೆ ಮಾಡಲು ಹಳ್ಳೂರವರಿಗೆ ಅಧಿಕಾರವಿಲ್ಲವೇ ಇಲ್ಲ. ಕೆಪಿಸಿಸಿಯಿಂದ ಬರಬೇಕು. ಶಾಸಕ ಪ್ರಸಾದ ಅಬ್ಬಯ್ಯ, ಇಲ್ಲಿನವರನ್ನ ದುರ್ಭಳಕೆ ಮಾಡಿಕೊಂಡು ನನ್ನ ಅಮಾನತ್ತು ಮಾಡಿಸಿದ್ದಾರೆ. ಈ ಎಲ್ಲವನ್ನೂ ಕೆಪಿಸಿಸಿಗೆ ಹೇಳುತ್ತೇನೆ. ನಾನೂ ಕಾಂಗ್ರೆಸ್ಸಿನ ಮನುಷ್ಯ. ಪಕ್ಷವನ್ನ ತೊರೆಯುವ ಪ್ರಶ್ನೆಯೇ ಇಲ್ಲ.