ಡಿಸಿ ಗನ್ ಮ್ಯಾನ್ ಗೂಂಡಾಗಿರಿ ದೂರು: ಗನ್ ಮ್ಯಾನ್ ಪ್ರಕಾಶ ಮಾಳಗಿ ಔಟ್..!
1 min readಧಾರವಾಡ: ಜಿಲ್ಲೆಯ ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಒಂದೀಡಿ ಗ್ರಾಮದ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಆತನಿಂದ ಗ್ರಾಮದಲ್ಲಿ ಅಶಾಂತಿ ಮೂಡಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಬೆನ್ನಲ್ಲೇ, ಗನ್ ಮ್ಯಾನ್ ರನ್ನ ಜಿಲ್ಲಾಧಿಕಾರಿಗಳು ಬದಲಾವಣೆ ಮಾಡಿದ್ದಾರೆ.
ಯಾದವಾಡ ಗ್ರಾಮದ ಪ್ರಕಾಶ ಯಲ್ಲಪ್ಪ ಮಾಳಗಿ ಎಂಬ ಡಿಆರ್ ಪೊಲೀಸ್, ಧಾರವಾಡ ಜಿಲ್ಲಾಧಿಕಾರಿಗಳು ಬಳಿ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಆದರೆ, ಈತನ ಉಪಟಳದಿಂದ ಯಾದವಾಡದ ಗ್ರಾಮದಲ್ಲಿ ಅಶಾಂತಿ ಮೂಡಿದೆ ಎಂದು ಗ್ರಾಮಸ್ಥರು ನಿನ್ನೆಯಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದರು.
ಗನ್ ಮ್ಯಾನ್ ಇದ್ದಿದ್ದನ್ನೇ ಬಂಡವಾಳ ಮಾಡಿಕೊಂಡು ಗ್ರಾಮದಲ್ಲಿ ಈತನ ಸಹೋದರರು ದಬ್ಬಾಳಿಕೆ ಮಾಡುತ್ತಿದ್ದಾರೆ. ಸುಭಾನಿ ಘಾಟಿನ ಎಂಬ ಸೈಕಲ್ ರಿಪೇರಿ ಮಾಡುವ ಹುಡುಗನಿಗೆ ಹೊಡೆದು ಬೆದರಿಕೆ ಹಾಕಲಾಗಿದೆ. ಚೇತನ ಕೋಯಪ್ಪನವರ ಎಂಬ ಯುವಕನ ಜೊತೆಗಿದ್ದ ಐದು ಯುವಕರಿಗೆ ಹೊಡೆದು ಧಮಕಿ ಹಾಕಿದ್ದಾನಂತೆ ಎಂದು ನಿನ್ನೆ ದೂರಿನಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಅಷ್ಟೇ ಅಲ್ಲ, ತಕ್ಷಣವೇ ಗೂಂಡಾಗಿರಿ ಮಾಡುವ ಗನ್ ಮ್ಯಾನ್ ಪ್ರಕಾಶ ಮಾಳಗಿಯನ್ನ ಅಮಾನತ್ತು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕಾಶ ಮಾಳಗಿಯವರನ್ನ ಬದಲಾವಣೆ ಮಾಡಿರುವ ಜಿಲ್ಲಾಧಿಕಾರಿಗಳು ಅವರ ಜಾಗಕ್ಕೆ ಸತೀಶ ಸುಣಗಾರ ಎಂಬ ಡಿಆರ್ ಪೇದೆಯನ್ನ ನೇಮಕ ಮಾಡಿದ್ದಾರಂತೆ.