ಪಾಲಿಕೆ ಮಾಜಿ ಸದಸ್ಯನ ಮಾನವೀಯತೆ: ಅನೇಕ ಕುಟುಂಬಗಳಿಗೆ ಸಹಾಯ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ ತಮ್ಮ ಕ್ಷೇತ್ರದ ಸುಮಾರು 1200 ಕುಟುಂಬಗಳಿಗೆ ದಿನಸಿ ವಸ್ತುಗಳಿರುವ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದ ಬಡ ಕುಟುಂಬಗಳಿಗೆ ನೆರವಾಗಿರುವ ಮಲ್ಲಿಕಾರ್ಜುನ ಗುಂಡೂರ, ತಾವೇ ವಿವಿಧ ಬಡಾವಣೆಗಳಿಗೆ ತೆರಳಿ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ.
ಪಾಲಿಕೆ ಮಾಜಿ ಸದಸ್ಯರಿಗೆ ಶಿವುಕುಮಾರ ಕೊಪ್ಪದ, ರಾಮಚಂದ್ರ ಹದಗಲ್, ನಿಂಗಣ್ಣಾ ಕುರಬರ, ಸಹದೇವ ಹೊಡಗಿ, ಹನಮಂತ ಅಂಬಿಗೇರ, ನಂದೂ ಗುಂಡೂರ, ಬಸವರಾಜ ಕುರುಬಗಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಪಕ್ಷದ ಕಾರ್ಯಕರ್ತರು ಸಾಥ್ ನೀಡಿದ್ದಾರೆ.