ಖ್ವಾಜಾ ಬಂದೇನವಾಜ್ ದರ್ಗಾದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ…!

ಕಲಬುರಗಿ: ಮಾಜಿ ಸಚಿವ ವಿನಯ ಕುಲಕರ್ಣಿಯವರು ಕಲಬುರಗಿಯ ಪ್ರತಿಷ್ಟಿತ ಖ್ವಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ತಮ್ಮ 25ನೇ ಮದುವೆಯ ವಾರ್ಷಿಕೋತ್ಸವ ಮುಗಿದ ಮೇಲೆ ಕಲಬುರಗಿಗೆ ತೆರಳಿದ ವಿನಯ ಕುಲಕರ್ಣಿ, ದರ್ಗಾಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನ ಈಡೇರಿಸುವಂತೆ ಪ್ರಾರ್ಥಿಸಿ, ‘ಛದ್ದರ್’ ಹಾಕಿದರು.
ಕೆಲಕಾಲ ದರ್ಗಾದಲ್ಲಿಯೇ ಸಮಯ ಕಳೆದ ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಆಪ್ತರು ಸಾಥ್ ನೀಡಿದ್ದರು. ಇದೇ ಸಮಯದಲ್ಲಿ ಕಲಬುರಗಿಯ ವಿವಿಧ ದೇವಸ್ಥಾನಗಳಿಗೂ ಭೇಟಿ ನೀಡಿ ಆಶೀರ್ವಾದ ಪಡೆದರು.