‘ಕೆಟಗೇರಿ’ ನಂದಾ, ನಿಂದಾ.. ಇಲ್ಲಾ ಇಬ್ರದ್ದೂ ಬಿಟ್ಟು ಅವರದ್ದಾ: ಡವ ಡವ ಶುರುವಾಗಿದೆ..!
1 min readಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಮುಗಿದು ಅದಾಗಲೇ ವಾರ ಮುಗಿದಿದ್ದು ನಾಳೆ ಮತ್ತೊಂದು ಹಂತದ ಡವ-ಡವ ಗ್ರಾಮ ಪಂಚಾಯತಿ ನೂತನ ಸದಸ್ಯರಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣವಾಗಿದ್ದು, ನಾಳೆಯಿಂದ ನಡೆಯುತ್ತಿರುವ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಬಗ್ಗೆ ಎಲ್ಲರ ದೃಷ್ಟಿ ನೆಟ್ಟಿದೆ.
ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ವಿಳಂಬವಾಗಿತ್ತು. ನಂತರ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಬಹುತೇಕ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಹೊಸ ಮುಖಗಳು ಸದಸ್ಯರಾಗಿ ಬಂದಿದ್ದಾರೆ. ಇದೇ ಕಾರಣದಿಂದ ಬಹುತೇಕರು ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣೀಟ್ಟಿದ್ದಾರೆ.
ಧಾರವಾಡ ಜಿಲ್ಲೆಯ ಏಳು ತಾಲೂಕುಗಳ ದಿನಾಂಕವನ್ನ ನಿಗದಿ ಮಾಡಿದ್ದು, ಅಳ್ನಾವರ ತಾಲೂಕಿನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನಜನೇವರಿ 12 ರಂದು ಬೆಳಿಗ್ಗೆ 10.30 ನಿಗದಿ ಮಾಡಲು ಅಳ್ನಾವರದ ಮರಾಠಾ ಮಂಗಲ ಕಲ್ಯಾಣ ಮಂಟಪದಲ್ಲಿ ಸೇರಲು ನಿರ್ಧರಿಸಲಾಗಿದೆ.
ಜನೇವರಿ 12ರಂದು ಮಧ್ಯಾಹ್ನ ಮೂರು ಗಂಟೆಗೆ ಧಾರವಾಡದ 35 ಗ್ರಾಮ ಪಂಚಾಯತಿಗಳಿಗೆ ಕಟೆಗೇರಿಯನ್ನ ನಿರ್ಧಿರಿಸಲು ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕುಂದಗೋಳದ 26 ಗ್ರಾಮ ಪಂಚಾಯತಿ ಕೆಟಗೇರಿಯನ್ನ ಜನೇವರಿ 13, ಮುಂಜಾನೆ 10.30ಕ್ಕೆ ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಆಯ್ಕೆ ಮಾಡಲಾಗುವುದು.
ಕಲಘಟಗಿಯ 28 ಪಂಚಾಯತಿಗಳ ಕೆಟಗೇರಿ ಆಯ್ಕೆಯು ಜನೇವರಿ 15 ರಂದು ಬೆಳಿಗ್ಗೆ 10.30ಕ್ಕೆ ಗುಡನ್ಯೂಸ್ ಕಾಲೇಜಿನಲ್ಲಿ ನಡೆಲಾಗುವುದೆಂದು ತಿಳಿಸಲಾಗಿದೆ.
ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯತಿಗಳಿಗೆ ಜನೇವರಿ 16ರಂದು ಬೆಳಿಗ್ಗೆ 10.30ಕ್ಕೆ ನ್ಯೂ ಕಾಟನ್ ಮಾರ್ಕೆಟನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ನವಲಗುಂದ 16 ಗ್ರಾಮ ಪಂಚಾಯತಿ ಕೆಟಗೇರಿ ಆಯ್ಕೆಯನ್ನ ಜನೇವರಿ 18 ರಂದು ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30 ನಡೆಸಲಾಗುವುದು.
ಅಣ್ಣಿಗೇರಿಯ 9 ಪಂಚಾಯತಿಗಳ ಆಯ್ಕೆಯನ್ನ ಜನೇವರಿ 18ರಂದು ಮಧ್ಯಾಹ್ನ 3.30ಕ್ಕೆ ನಡೆಸಲಾಗುವುದೆಂದು ಜಿಲ್ಲಾಧಿಕಾರಿಗಳು ಮಾಹಿತಿಯನ್ನ ನೀಡಿದ್ದಾರೆ.