ಗ್ರಾಮೀಣ ಶಿಕ್ಷಕರ ಸಂಘ: ವಿಜಯಪುರ-ಬೆಂಗಳೂರು ದಕ್ಷಿಣ-ಉತ್ತರಕನ್ನಡಕ್ಕೆ ಆಯ್ಕೆ
ಧಾರವಾಡ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕದ ವಿಜಯಪುರ ಜಿಲ್ಲೆಯ ನೂತನ ಘಟಕ ರಚನೆಯಾಯಿತು.
ಸಂಸ್ಥಾಪಕ ನೂತನ ಅಧ್ಯಕ್ಷರಾಗಿ ಸಿದ್ದಣ್ಣ ಉಕ್ಕಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಡಿ.ದೊಡಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ನಾಗೇಶ ಮಡಿವಾಳ
ಭಟ್ಕಳ ತಾಲೂಕಿನ ತಾಲೂಕಾ ಸಂಪನ್ಮೂಲ ಶಿಕ್ಷಕರು ಉತ್ಸಾಹಿ ತರುಣರು ಸೃಜನಶೀಲರು ವಿಶಿಷ್ಟ ಶೈಕ್ಷಣಿಕ ವಿಚಾರಧಾರೆಗಳನ್ನು ಹೊಂದಿರುವ ನಾಗೇಶ ಮಡಿವಾಳ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಬೆಂಗಳೂರು ದಕ್ಷಿಣಕ್ಕೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಲಕ್ಷ್ಮಿನರಸಿಂಹಯ್ಯ
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ. ರಾಜ್ಯ ಘಟಕ ಹುಬ್ಬಳ್ಳಿ ಇದರ ರಾಜ್ಯ ಮಟ್ಟದ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ದಕ್ಷಿಣ ಒಂದನೇ ವಲಯದ ರಾಮೋನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹಲವು ಸಂಘಟನೆಗಳಲ್ಲಿ ಸೇವಾ ಕೈಂಕರ್ಯದಿಂದ ಕಾರ್ಯೋನ್ಮುಖವಾಗಿರುವ ಲಕ್ಷ್ಮಿನರಸಿಂಹಯ್ಯರವರನ್ನು ನೇಮಕ ಮಾಡಿದ್ದಾರೆ.
ಈ ಎಲ್ಲ ಪದಾಧಿಕಾರಿಗಳನ್ನ ರಾಜ್ಯಾಧ್ಯಕ್ಷ ಅಶೋಕ.ಎಂ.ಸಜ್ಜನ ರಾಜ್ಯ ಪ್ರ.ಕಾ.ಮಲ್ಲಿಕಾರ್ಜುನ ಉಪ್ಪಿನ ನೇಮಕ ಮಾಡಿದ್ದಾರೆ. ನೂತನ ಪದಾಧಿಕಾರಿಗಳನ್ನು ರಾಜ್ಯ ಘಟಕದ ನಾಡೋಜ ಮಹೇಶ ಜೋಶಿ ಎಲ್.ಐ.ಲಕ್ಕಮ್ಮನವರ. ಶರಣಪ್ಪಗೌಡ್ರ, ಎಸ್.ಎಫ್.ಪಾಟೀಲ, ಪವಾಡೆಪ್ಪ ಕಾಂಬಳೆ, ಆರ್.ನಾರಾಯಣಸ್ವಾಮಿ, ಶ್ರೀನಿವಾಸ ಮಾಗೇರಿ, ಶಾಮೇಗೌಡ್ರ ಶ್ರೀಕಾಂತ ಸೊಣ್ಣಪ್ಪ ಮುಂತಾದವರು ಅಭಿನಂದಿಸಿದ್ದಾರೆ.