Posts Slider

Karnataka Voice

Latest Kannada News

ಅಮ್ಮಿನಬಾವಿಯ “ಪದ್ಮಾವತಿ” ಜನರಿಗಾಗಿ ಕಾರನ್ನೇ ಮುಡಿಪಾಗಿಟ್ಟರು…!

1 min read
Spread the love

ಅಮ್ಮಿನಭಾವಿ: ಗ್ರಾಮ ಪಂಚಾಯತಿ ಸದಸ್ಯೆ ಪದ್ಮಾವತಿ ಅವರು ಕೊರೋನಾ ಹಿನ್ನೆಲೆಯಲ್ಲಿ ತಮ್ಮ  ಸ್ವಂತ ಕಾರನ್ನು ತನ್ನ ವಾರ್ಡ್ ಜನರ ತುರ್ತು ಸೇವೆಗೆ ಉಚಿತವಾಗಿ ನೀಡಿ, ತಾವೂ ಕೇವಲ ಮತಕ್ಕಾಗಿ ರಾಜಕಾರಣಿಯಾಗಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಧಾರವಾಡ ತಾಲೂಕ ಅಮ್ಮಿನಭಾವಿ ಗ್ರಾಮ ಪಂಚಾಯತಿಯ 6 ನೇ ವಾರ್ಡಿನ ಸದಸ್ಯೆ ಪದ್ಮಾವತಿ ತವನಪ್ಪ ದೇಸಾಯಿಯವರು ಕೊರೋನಾ ಸೋಂಕಿಗೆ ಒಳಗಾದ ತಮ್ಮ ವಾರ್ಡಿನ ಪ್ರತಿಯೊಬ್ಬರಿಗೂ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದೇ ಕಾರಣಕ್ಕೆ ತಮ್ಮ ಕಾರನ್ನ ಮೀಸಲಿಟ್ಟಿದ್ದಾರೆ.

ಈಗಿನ ಕಾಲದಲ್ಲಿ ತಮ್ಮ ಹಿತಾಸಕ್ತಿಗಾಗಿ ಆಸ್ತಿ ಪಾಸ್ತಿ ಮಾಡುವ ಜನಪ್ರತಿನಿಧಿಗಳೇ ಹೆಚ್ಚಾಗಿದ್ದು, ಅಂತವರ ನಡುವೆ ಹಿಂತಹ ಸಮಯದಲ್ಲಿ ತಮ್ಮ ಸ್ವ ಖರ್ಚಿನಿಂದ ತಮ್ಮ ಕಾರನ್ನು ಸೇವೆಗೆ ಬಿಟ್ಟು ಜನಪರ ಆರೋಗ್ಯಕ್ಕಾಗಿ ಕಾಳಜಿ ವಹಿಸಿದ್ದಾರೆ. ಮುಖ್ಯವಾಗಿ ಗ್ರಾಮ ಪಂಚಾಯತಿ ಸದಸ್ಯರು ಹೇಳುವ ಪ್ರಕಾರ ಎಲ್ಲವನ್ನೂ ಎಲ್ಲವನ್ನೂ ಸರ್ಕಾರವೇ ಮಾಡಬೇಕಂತಿಲ್ಲಾ ಸರ್ಕಾರದ ಜೊತೆ ನಾವು ಸಹ ಇಂತಹ ಅಳಿಲು ಸೇವೆಯನ್ನು ಮಾಡಿದ್ದೆ. ಆದರೆ, ಕೊರೋನ ಮುಕ್ತ ವಾರ್ಡಿನ ಜೊತೆ ಗ್ರಾಮ, ತಾಲೂಕ್,ಜಿಲ್ಲಾ ,ರಾಜ್ಯ ಹಾಗೂ ದೇಶದಲ್ಲಿ ಕೋರೋನಾ ಮುಕ್ತ ಮಾಡುವುದಕ್ಕೆ  ಎಲ್ಲಾ ಜನಪ್ರತಿನಿಧಿಗಳು ಮುಂದೆ ಬಂದಿರೆ ದೇಶದ ಜನರ ಆರೋಗ್ಯ ಕಾಯೋದು ಆಸಾಧ್ಯವಾದ ಮಾತೇನಲ್ಲ ಎನ್ನುತ್ತಾರೆ.

ತಾಲ್ಲೂಕು   ಸದಸ್ಯ ಸುರೇಂದ್ರ ದೇಸಾಯಿ, ಪರಮೇಶ್ವರ ಅಕ್ಕಿ,  ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ ಸೇವಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ, ಅಜೀತಸಿಂಗ ರಜಪೂತ, ಮಂಜುನಾಥ ವಾಸಂಬಿ ಸೇರಿದಂತೆ ಗ್ರಾಮದ ಹಿರಿಯರಾದ ಮಂಜುನಾಥ ದೇವರಮನಿ, ಕಲ್ಲಪ್ಪ ಪೂಜಾರ, ಗುರುಬಸವ ಗೊಬ್ಬರಗುಂಪಿ,  ಬಸವರಾಜ ಯಲಿವಾಳ, ಪರಮೇಶ್ವರ ಹೂಲಿ,ಬಸವನ್ನೆಪ್ಪ ಪೂಜಾರ, ಮಲ್ಲಿಕಾರ್ಜುನ ಧನಸನ್ನವರ,ಬಸವರಾಜ   ಮುಂತಾದವರು ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed