ಗ್ರಾಮ ಪಂಚಾಯತಿ ನೇಮಕ: ಸಧ್ಯದಲ್ಲೇ ತೀರ್ಮಾನ: ಈಶ್ವರಪ್ಪ
1 min readರಾಯಚೂರು: ಗ್ರಾಮ ಪಂಚಾಯತಿಗಳಲ್ಲಿ ಅವಧಿ ಮುಗಿದಿದೆ, ಕೆಲವಡೆ ಮುಗಿಯುತ್ತಿದೆ. ಹೀಗಾಗಿ ಅಲ್ಲಿ ಆಡಳಿತಾಧಿಕಾರಿ ಹಾಕಬೇಕಾ ಇರುವ ಸದಸ್ಯರನ್ನೇ ಮುಂದುವರಿಸಬೇಕಾ ಎಂಬುದರ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ರಾಯಚೂರು ತಾಲೂಕಿನ ಗಾಣದಾಳ ಗ್ರಾ.ಪಂ ವ್ಯಾಪ್ತಿ ಸೇರಿ ವಿವಿಧೆಡೆ ಕಾಮಗಾರಿ ಪರಿಶೀಲನೆ ನಡೆಸುವ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ಗ್ರಾಮ ಪಂಚಾಯತಿ ಚುನಾವಣೆ ನಡೆಸದಿದ್ದರೆ ಕಾಂಗ್ರೆಸ್ ಮುಖಂಡರು ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಬೇರೆ ಕೆಲಸವೇನಿದೆ. ನಾವು ಚುನಾವಣೆ ನಡೆಸಲು ಸಿದ್ದರಾಗಿದ್ದೇವೆ ಎಂದರು.
ಉಮೇಶ ಕತ್ತಿ, ದಿನೇಶ ಕತ್ತಿ ಏನು ಮಾಡಿದ್ದಾರೆ ಎಂಬುವುದು ನಂಗೆ ಗೊತ್ತಿಲ್ಲ. ಯಾವುದೊ ಕಾರಣಕ್ಕೆ ಸೇರಿದರೆ ಅದನ್ನು ಭಿನ್ನಮತ ಅನ್ನೋದು ಗೊತ್ತಿಲ್ಲವೆಂದು ಇದೇ ಸಮಯದಲ್ಲಿ ಸಚಿವರು ಹೇಳಿದರು.