ಗ್ರಾಮ ಪಂಚಾಯತಿ ಕಾರ್ಯದರ್ಶಿಯ ಹತ್ಯೆ..!

ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅವುಲನಾಗೇನಹಳ್ಳಿಯಲ್ಲಿ ಸಂಭವಿಸಿದೆ.
ಬೆಂಗಳೂರು ನಗರದ ಬಂಡಿಕೊಡಿಗೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮಾಂಜಿಯನ್ನ ಕೊಲೆ ಮಾಡಲಾಗಿದ್ದು, ರಾಮಾಜಿ ಪತ್ನಿ ಮಂಜುಳಮ್ಮಳ ಕೈ ಬೆರಳುಗಳನ್ನ ಕತ್ತರಿಸಲಾಗಿದೆ.
ಅವುಲನಾಗೇನಹಳ್ಳಿ ಗ್ರಾಮದ ಗರಿಗ ವೆಂಕಟರೆಡ್ಡಿ ಕುಟುಂಬಸ್ಥರಿಂದ ಕೊಲೆ ನಡೆದಿದ್ದು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಇಂದು ಅದು ವಿಕೋಪಕ್ಕೆ ಹೋಗಿದ್ದು, ಕಾರ್ಯದರ್ಶಿ ಹತ್ಯೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ. ಕಾರ್ಯದರ್ಶಿಯ ಪತ್ನಿಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದೇ ಆಸ್ಪತ್ರೆಯ ಶವಾಗಾರಕ್ಕೆ ಕಾರ್ಯದರ್ಶಿ ರಾಮಾಂಜಿ ಶವವನ್ನ ಸ್ಥಳಾಂತರ ಮಾಡಲಾಗಿದೆ.