ಶಿರಗುಪ್ಪಿಯಲ್ಲಿ ಬೆಂಕಿಗೆ ಗ್ರಾಮ ಪಂಚಾಯತಿ ಮೆಂಬರ್ ದುರ್ಮರಣ..!

ಚಿಕ್ಕೋಡಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿದ ಪರಿಣಾಮ ಗ್ರಾಮ ಪಂಚಾಯತಿ ಸದಸ್ಯರೋರ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ಸದಸ್ಯ, ಶಿರಗುಪ್ಪಿ ಗ್ರಾಮದ ಸೋಮೇಶ ಶಿವಾನಂದ ಪಾಟೀಲ (32) ಮೃತ ವ್ಯಕ್ತಿ. ಹಳೆಯ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಕಡೆಯಿದ್ದರು. ಇವರು ಮಾತ್ರ ಮನೆಯ ಛಾವಣಿ ಮೇಲೆ ಮಲಗಿದ್ದರು. ಆದರೆ ರಾತ್ರಿ ವೇಳೆ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಛಾವಣಿ ಮೇಲಿದ್ದ ಪರಿಣಾಮ ಕಾಪಾಡಲು ಸಾಧ್ಯವಾಗದೆ ಸೋಮೇಶ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.
ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣವನ್ನ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.