ರಾಜ್ಯದ ಸರಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಿಸಿ ಆದೇಶ- ಪ್ರತಿಯೊಂದಿಗೆ ಸಂಪೂರ್ಣ ಮಾಹಿತಿ..

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಸರಕಾರಿ ನೌಕರರಿಗೆ ಸಿಹಿ ಸುದ್ದಿಯನ್ನ ನೀಡಿದ್ದು, ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ್ದ ಸಿಎಂ, ರಾಜ್ಯ ಸರಕಾರಿ ನೌಕರರಿಗೆ ಜನೇವರಿ 1ರಿಂದ ಜಾರಿಯಾಗುವಂತೆ ತುಟ್ಟಿ ಭತ್ಯೆಯನ್ನ ಹೆಚ್ಚಿಸಲು ನಿರ್ಧರಿಸಿರುವ ಆದೇಶ ಕೂಡ ಹೊರ ಬಿದ್ದಿದೆ.


ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಸರಕಾರ 1447 ಕೋಟಿ ರೂಪಾಯಿ ವಾರ್ಷಿಕ ವೆಚ್ಚ ಭರಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.