ಸರಕಾರಿ ಮದುವೆಗೆ ಸಿದ್ಧವಾದ ಸರಕಾರ: ಮದುವೆ ಆಗಬೇಕೆ ಅರ್ಜಿ ಹಾಕಿ

ಧಾರವಾಡ: ಧಾರ್ಮಿಕ ದತ್ತಿ ಇಲಾಖೆಯು ಏಪ್ರೀಲ್ 26 ಅಥವಾ ಮೇ 24ರಂದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ ತಿಳಿಸಿದ್ದಾರೆ.
ಆಸಕ್ತ ವಧು-ವರರು ಜನನ ಪ್ರಮಾಣ ಪತ್ರ, ಭಾವಚಿತ್ರ, ಆಧಾರ ಕಾರ್ಡ್, ಪಡಿತರ ಚೀಟಿ, ಅವಿವಾಹಿತ ದೃಢೀಕರಣ ಪತ್ರಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಿದ್ದಾರೆ.
ಸಾಮೂಹಿಕ ವಿಹಾವದಲ್ಲಿ ಮದುವೆಯಾಗುವ ವರನಿಗೆ ಹೂವಿನ ಹಾರ, ಪಂಚೆ, ಷರ್ಟ್, ಶಲ್ಯಕ್ಕಾಗಿ 5ಸಾವಿರ ರೂಪಾಯಿ. ವಧುವಿಗೆ ಧಾರೆ ಸೀರೆ, ರವಿಕೆ ಕಣಕ್ಕಾಗಿ 10ಸಾವಿರ ರೂ. ಎಂಟು ಗ್ರಾಂ ತೂಕದ ಚಿನ್ನದ ತಾಳಿ ಹಾಗೂ ಎರಡು ಬಂಗಾರದ ಗುಂಡುಗಳಿಗಾಗಿ 40 ಸಾವಿರ ರೂಪಾಯಿ ಸೇರಿ ಒಟ್ಟು 55ಸಾವಿರ ರೂಪಾಯಿ ದೇವಾಲಯಗಳ ನಿಧಿಯಿಂದ ನೀಡಲಾಗುವುದೆಂದು ಮಾಹಿತಿ ನೀಡಿದರು.