ಧಾರವಾಡದ ಶಾಲೆಯಲ್ಲಿ “ಗೋಬಿ ಮಂಚೂರಿ” ಮಾರಾಟ: ಹಣ ಪಡೆಯಲು BRC ಕುಮ್ಮಕ್ಕು..!?

ಧಾರವಾಡ: ವಿದ್ಯಾಕಾಶಿಯ ಸರಕಾರಿ ಶಾಲೆಯನ್ನ ಗೋಬಿ ಮಂಚೂರಿ ಮಾರಾಟ ಮಾಡಿಸಲು ಅವಕಾಶ ಕೊಟ್ಟ ಪ್ರಕರಣ ಶಿಕ್ಷಣ ಇಲಾಖೆಯಲ್ಲಿ ತೀವ್ರ ಚರ್ಚೆಯನ್ನ ಹುಟ್ಟು ಹಾಕಿದ್ದು, ಹಣ ಪಡೆದವರು ಯಾರು ಎಂಬುದು ಇದೀಗ ಬಹಿರಂಗವಾಗುತ್ತಿದೆ.
ಗೋಬಿ ಮಂಚೂರಿ ಮಾರಾಟ ಮಾಡುತ್ತಿರುವ ವೀಡಿಯೋ..
ಧಾರವಾಡದ ರವಿವಾರಪೇಟೆಯಲ್ಲಿರುವ ಸರಕಾರಿ ಉರ್ದು ಶಾಲೆ ನಂಬರ 1 ರ ಮುಖ್ಯಾಧ್ಯಾಪಕ ಎಸ್.ಎ.ಪೀರಜಾದೆ ಅವರೇ ಗೋಬಿ ಮಂಚೂರಿ ಮಾರಾಟ ಮಾಡಲು, ಬಾಡಿಗೆಗೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಇವರಿಗೆ ಬೆಂಬಲವಾಗಿ CRP ಹಾಗೂ BRCಯವರು ಇದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.
ಪ್ರಮುಖವಾಗಿ BRC ಯವನೇ ಮುಖ್ಯಾಧ್ಯಾಪಕನಿಗೆ ಕುಮ್ಮಕ್ಕು ನೀಡಿದ್ದರಿಂದಲೇ ಒಲ್ಲದ ಮನಸ್ಸಿಂದ ಮುಖ್ಯಾಧ್ಯಾಪಕ ಪೀರಜಾದೆ ಬಾಡಿಗೆ ಪಡೆದಿದ್ದಾನೆಂದು ಹೇಳಲಾಗುತ್ತಿದೆ.
ಇಲಾಖೆಯ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವಲ್ಲಿ ಪ್ರಮುಖ ಪಾತ್ರಧಾರಿಯಾಗಿರುವಂತೆ ಕಂಡು ಬರುವ BRC, ಅತಿಥಿ ಶಿಕ್ಷಕರ ವೇತನ, ಪ್ರತಿಭಾ ಕಾರಂಜಿ, ಶಿಕ್ಷಕರ ತರಬೇತಿ, ಸರಕಾರ ನೀಡುವ ಶೂ ಸಾಕ್ಸ್ ವಿತರಣೆಯಲ್ಲೂ ಲಕ್ಷಾಂತರ ಗೋಲ್ ಮಾಲ್ ನಡೆಯಲು ಕಾರಣವಾಗಿದ್ದಾರೆಂಬ ಅಂಶಗಳು ‘ಗೋಬಿ ಮಂಚೂರಿ’ ಹಗರಣದ ಮೂಲಕ ಹೊರ ಬರಲಾರಂಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟೀಸ್ ನೀಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.