ಷಡಕ್ಷರಿಯವರೇ ನಿಮ್ಮ ಸಂಘದಿಂದ ಶಿಫಾರಸ್ಸು ಮಾಡಿ: ರಾಜ್ಯಾಧ್ಯಕ್ಷ ಅಶೋಕ ಸಜ್ಜನ
ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಹೊಸದಾಗಿ ಮಂಜೂರಾದ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ ನೇಮಕ ಮಾಡುವಂತೆ ಸರಕಾರಕ್ಕೆ ತಮ್ಮ ಸಂಘದ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಒತ್ತಾಯಿಸಿದ್ದಾರೆ.
ಈ ಬಗ್ಗೆ ಷಡಕ್ಷರಿ ಅವರಿಗೆ ಪತ್ರ ಬರೆದಿರುವ ಸಂಘವೂ ಗ್ರಾಮೀಣ ಭಾಗದ ಶಾಲೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ತಾವೂ ಸರಕಾರದ ಗಮನ ಸೆಳೆಯಬೇಕೆಂದು ಕೋರಿದ್ದಾರೆ.
ಈ ಬಗ್ಗೆ ಬರೆದಿರುವ ಪತ್ರ ವಿವರ ಇಲ್ಲಿದೆ ನೋಡಿ
ಇವರಿಗೆ ….
ಸನ್ಮಾನ್ಯ ಶ್ರೀ ಸಿ.ಎಸ್.ಷಡಕ್ಷರಿಯವರು
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.ರಿ.ರಾಜ್ಯ ಘಟಕ ಬೆಂಗಳೂರು-01
ಮಾನ್ಯರೇ…
ವಿಷಯ: ರಾಜ್ಯದ ಹೊಸದಾಗಿ ಮಂಜೂರಾಗಿರುವ ತಾಲ್ಲೂಕುಗಳಿಗೆ ಶೀಘ್ರವಾಗಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಯನ್ನು ನೇಮಿಸುವ ಕುರಿತು ಘನ ಸರ್ಕಾರಕ್ಕೆ ತಮ್ಮ ಸಂಘದಿಂದ ಶಿಫಾರಸ್ಸಿನೊಂದಿಗೆ ಮನವಿ ಪತ್ರ ನೀಡಲು ವಿನಂತಿಸಿಕೊಂಡ ಬಗ್ಗೆ
ಮಾನ್ಯರೆ ರಾಜ್ಯದಲ್ಲಿ ಹೊಸದಾಗಿ ಮಂಜೂರಾಗಿರುವ….. ಹೊಸತಾಲೂಕು ಗಳಿಗೆ ಮಕ್ಕಳ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಮತ್ತು ಇನ್ನಷ್ಟು ಗುಣಮಟ್ಟದ ಶಿಕ್ಷಣವನ್ನು ಅನುಷ್ಠಾನ ಗೊಳಿಸುವುದಕ್ಕಾಗಿ, ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿಪರ ದೆಸೆಯಲ್ಲಿ ಸಾಗಲು ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕೂಡಲೇ ಹೊಸ ಕ್ಷೇತ್ರಶಿಕ್ಷಣಾಧಿಕಾರಿಗಳ ಹುದ್ದೆಯನ್ನು ಮಂಜೂರು ಮಾಡಿ ಶಿಕ್ಷಣಾಧಿಕಾರಿಗಳನ್ನು ಒದಗಿಸಿಕೊಟ್ಟು , ನಮ್ಮ ಶಿಕ್ಷಕರ ಮತ್ತು ಪಾಲಕರ ಮತ್ತು ಸಮಾಜದ ಶಿಕ್ಷಣದ ಏಳಿಗೆಗಾಗಿ ತಾವು ಇನ್ನಷ್ಟು ಸ್ಪೂರ್ತಿ ನೀಡಬೇಕೆಂದು ಕೇಳಿಕೊಳ್ಳುತ್ತೇವೆ.ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಸುಲಲಿತವಾದ ಆಡಳಿತಕ್ಕಾಗಿ ಇದು ಅತ್ಯಗತ್ಯವಿದ್ದು ಬೇರೆ ಬೇರೆ ಇಲಾಖೆಗೆ ನೇಮಿಸಿರುವಂತೆ ನಮ್ಮ ಶಿಕ್ಷಣ ಇಲಾಖೆಗೆ ಆದಷ್ಟು ಶೀಘ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿ ಕಾರ್ಯಾಲಯಗಳನ್ನು ಪ್ರಾರಂಭಿಸಬೇಕು. ಸಿಬ್ಬಂದಿಯನ್ನು ಒದಗಿಸಬೇಕೆಂದು ಕರ್ನಾಟಕ ಘನ ಸರ್ಕಾರಕ್ಕೆ ಸಿಫಾರಸ್ಸು ಮನವಿ ಪತ್ರ ನೀಡಬೇಕೆಂದು ನಾಡಿನ ಹೊಸ ತಾಲೂಕುಗಳ ಸಮಸ್ತ ಗುರು ಬಳಗದ ವತಿಯಿಂದ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ
ಗೌರವಪೂರ್ವಕ ವಂದನೆಗಳೊಂದಿಗೆ
ತಮ್ಮವಿಧೇಯಕರು
ಅಧ್ಯಕ್ಷರು ಪ್ರಧಾನಕಾರ್ಯದರ್ಶಿ
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ರಾಜ್ಯ ಘಟಕ,ಹುಬ್ಬಳ್ಳಿ