ಸಾರ್ವಜನಿಕ ಸ್ಥಳದಲ್ಲೂ ಗಣೇಶ ಪ್ರತಿಷ್ಠಾಪನೆ: ಸರಕಾರದ ಹೊಸ ಆದೇಶ
ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವ ನಡೆಸಬೇಕು-ನಡೆಸಬಾರದೆಂಬ ಗೊಂದಲದಿಂದ ಹೋರಾಟಗಳು ನಡೆಯುವಂತಾಗಿದ್ದವು. ಇದೀಗ ರಾಜ್ಯ ಸರಕಾರ ಹೊಸ ಆದೇಶವನ್ನ ಹೊರಡಿಸಿದ್ದು, ಕನಿಷ್ಟ ಸಂಖ್ಯೆಯೊಂದಿಗೆ ಸಾರ್ವಜನಿಕ ಪ್ರದೇಶದಲ್ಲೂ ಹಬ್ಬಕ್ಕೆ ಅನುಮತಿ ನೀಡಿದ್ದಾರೆ.
ರಾಜ್ಯ ಸರಕಾರ ಈ ಹಿಂದೆ ಮನೆಯಲ್ಲೇ ಗಣೇಶನನ್ನ ಪ್ರತಿಷ್ಠಾಪನೆ ಮಾಡಬೇಕೆಂದು ಹೇಳಿತ್ತು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬಾರದೆಂದು ಸೂಚನೆ ನೀಡಿತ್ತು.
ಸರಕಾರದ ಆದೇಶದ ವಿರುದ್ಧ ಹಲವರು ಹಲವು ರೀತಿಯಲ್ಲಿ ಹೋರಾಟ ಮಾಡಿದ್ದರು. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್, ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಧ್ವನಿಯಾಗಿದ್ದರು. ನಿನ್ನೆಯೂ ಕೂಡಾ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡಿದ್ದರು.
ಸರಕಾರ ಪರಿಷ್ಕೃತ ಆದೇಶವನ್ನ ಹೊರ ಹಾಕಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡುವವರು ನಾಲ್ಕು ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕೆಂದು ಹೇಳಿದೆ.
ಸಾರ್ವಜನಿಕ ಗಣೇಶನಿಡುವ ಜಾಗದಲ್ಲಿ ಆವರಣವನ್ನ ನಿರ್ಮಿಸಿ 20 ಕ್ಕಿಂತ ಹೆಚ್ಚು ಭಕ್ತರು ಸೇರದಂತೆ ನೋಡಿಕೊಳ್ಳಬೇಕೆಂದು ಕೋರಿದೆ.