ಕೊರೋನಾ ಚಿಕಿತ್ಸೆಗೆ ಗಂಡಾತರ.. ಸರಕಾರಕ್ಕೆ ಸರಕಾರಿ ವೈದ್ಯರ ಎಚ್ಚರಿಕೆ.. ಸೋಮವಾರದಿಂದ ಕಾರ್ಯನಿರ್ವಹಣೆ ಡೌಟ್..?
ಬೆಂಗಳೂರು: ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸರ್ಕಾರಿ ವೈದ್ಯರುಗಳನ್ನ ರಾಜ್ಯಾಡಳಿತ ಮತ್ತು ಜಿಲ್ಲಾಡಳಿತ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದು, ಇದಕ್ಕೆ ಸೂಕ್ತವಾದ ಕ್ರಮ ಜರುಗಿಸದೇ ಇದ್ದರೇ ಸೋಮವಾರದಿಂದ ಯಾವುದೇ ಕೋವಿಡ್ ವರದಿ ಮತ್ತು ಕಾರ್ಯ ಚಟುವಟಿಕೆ ನಡೆಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಂಘ, ಜಿಲ್ಲಾಡಳಿತವೂ ಸರಕಾರಿ ವೈಧ್ಯರನ್ನ ಮಾನವೀಯತೆ ಆದಾರದ ಮೇಲೆ ನೋಡದೇ ಗುರಿ ಸಾಧಿಸಲು ಕಿರುಕುಳ ನೀಡುತ್ತಿದೆ ಎಂದು ದೂರಿದ್ದಾರೆ.
ಈಗಾಗಲೇ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳನ್ನ ಬದಲಾವಣೆ ಮಾಡಿ ಆರೋಗ್ಯ ಇಲಾಖೆಯ ಹಿರಿಯಅಧಿಕಾರಿಗಳನ್ನ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಬೇಕೆಂದು ಸಂಘಡ ರಾಜ್ಯಾಧ್ಯಕ್ಷ ಡಾ.ಜಿ.ಎ.ಶ್ರೀನಿವಾಸ ಆಗ್ರಹಿಸಿದ್ದು, ಇದಕ್ಕೆ ಸರಕಾರ ಸ್ಪಂಧಿಸದಿದ್ದೇ ಸೋಮವಾರದಿಂದ ಕೋವಿಡ್-19ಗೆ ಸಂಬಂಧಿಸಿದ ಕಾರ್ಯಚಟುವಟಿಕೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.