2022 ರಲ್ಲಿ “ಎರಡು ಸಲ” ಹೋಳಿ ಹುಣ್ಣಿಮೆ ರಜೆ ನೀಡಿದ ಸರಕಾರ….!

ಬೆಂಗಳೂರು: ಪ್ರತಿ ಸಲದಂತೆ ರಾಜ್ಯ ಸರಕಾರ ವರ್ಷದ ಕೊನೆಯಲ್ಲಿ ಮುಂಬರುವ ವರ್ಷದ ರಜೆ ದಿನಗಳನ್ನ ಘೋಷಣೆ ಮಾಡುತ್ತ ಬಂದಿದ್ದು, ಈ ಸಲ ಸರಕಾರ ಎರಡು ಸಲ ಹೋಳಿಹುಣ್ಣಿಮೆ ರಜೆಯನ್ನ ಘೋಷಣೆ ಮಾಡಿದೆ.
ಹೊಸ ವರ್ಷವಾದ 2022ರಲ್ಲಿ ಒಟ್ಟು 22 ರಜೆಗಳನ್ನ ಘೋಷಣೆ ಮಾಡಿದ್ದು, ಅದರಲ್ಲಿ ಮಾರ್ಚ 17ಕ್ಕೆ ಹಾಗೂ ಏಪ್ರೀಲ್ 16ಕ್ಕೆ ಎರಡು ಸಲ ಹೋಳಿ ಹುಣ್ಣಿಮೆ ರಜೆಯನ್ನ ಘೋಷಣೆ ಮಾಡಿದೆ.

ಪ್ರತಿ ವರ್ಷ, ವರ್ಷದಲ್ಲಿ ಒಂದೇ ಬಾರಿ ಹೋಳಿ ಹುಣ್ಣಿಮೆ ರಜೆಯನ್ನ ಘೋಷಣೆ ಮಾಡುತ್ತಿದ್ದ ಸರಕಾರ ಈ ಬಾರಿ, ಎರಡೆರಡು ಬಾರಿ ನೀಡಿರುವುದು ಅಚ್ಚರಿಯ ಸಂಗತಿಯಾಗಿದೆ.
ಈ ಯಡವಟ್ಟನ್ನ ಸರಕಾರ ಸರಿಪಡಿಸತ್ತಾ ಎಂಬುದನ್ನ ಕಾದು ನೋಡಬೇಕಿದೆ.