ಗೋವನಕೊಪ್ಪ, ದಂಡಿಕೊಪ್ಪದ ಬಳಿ ಮಹಿಳೆಯರ ಮೇಲೆ ‘ಕಾಡು ಪ್ರಾಣಿ’ ಅಟ್ಯಾಕ್…!

ಧಾರವಾಡ: ತಾಲೂಕಿನ ಗೋವನಕೊಪ್ಪ ಮತ್ತು ದಂಡಿಕೊಪ್ಪದ ಬಳಿ ಮಹಿಳೆಯರ ಮೇಲೆ ದಾಳಿ ಮಾಡಿರುವುದು ಕಾಡು ಪ್ರಾಣಿಯೇ ಹೊರತು ಚಿರತೆ ಎಂದು ಸುಳ್ಳು ಸುದ್ದಿಯನ್ನ ಹಬ್ಬಿಸಬೇಡಿ ಎಂದು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಎಚ್ಚರಿಕೆ ನೀಡಿದ್ದಾರೆ.

ಕಾಡು ಪ್ರಾಣಿಯು ದಾಳಿ ಮಾಡಿದ್ದು, ಮಹಿಳೆಯರಿಗೆ ಗಾಯಗಳಾಗಿವೆ. ಅದು ಚಿರತೆ ಅಥವಾ ತೋಳವೋ ಅಥವಾ ಮತ್ಯಾವುದೋ ಪ್ರಾಣಿ ಎಂಬುದು ಕಾರ್ಯಾಚರಣೆಯ ನಂತರ ತಿಳಿದು ಬರುತ್ತದೆಯೋ ಹೊರತಾಗಿ ಮೊದಲೇ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಳ್ಳು ಮಾಹಿತಿಯನ್ನ ನಂಬದೇ ಇರಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುವ ಅಧಿಕಾರಿಗಳು, ಗ್ರಾಮದ ಹೊರಗಡೆ ಒಬ್ಬೋಬ್ಬರಾಗಿ ಸಂಚಾರ ಮಾಡದಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಶಾಸಕ ಅಮೃತ ದೇಸಾಯಿ ಆಸ್ಪತ್ರೆಗೆ ಹೋಗಿ, ಮಹಿಳೆಯರಿಗೆ ಸಾಂತ್ವನ ಹೇಳಿ ಬಂದಿದ್ದಾರೆ.