ಹುಬ್ಬಳ್ಳಿಯಲ್ಲಿ ಪಾಲಿಕೆ ಇದೇಯಾ…!? ರಸ್ತೆಯಲ್ಲಿ ಜನರ ಜೀವನಕ್ಕೆ ಕಂಟಕ…! ವೀಡಿಯೋ ನೋಡಿದ್ರೇ ನೀವೂ ಹೌಹಾರೋದು ಗ್ಯಾರಂಟಿ…!
1 min readಹುಬ್ಬಳ್ಳಿ: ಮಹಾನಗರ ಪಾಲಿಕೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡುವಾಗ ಕೈಯಲ್ಲಿ ಜೀವವನ್ನ ಹಿಡಿದುಕೊಂಡು ತಿರುಗುವ ಸ್ಥಿತಿ ಬಂದಿದೆ. ಅದಕ್ಕೊಂದು ತಾಜಾ ಉದಾಹರಣೆಯಂದರೇ ಹುಬ್ಬಳ್ಳಿಯ ಅರಳಿಹೊಂಡ ಪ್ರದೇಶದಲ್ಲಿ ನಡೆದಿರುವ ಘಟನೆ.
ಎಕ್ಸಕ್ಲೂಸಿವ್ ವೀಡಿಯೋ..
ಈ ವೀಡಿಯೋ ನೋಡಿದ ಮೇಲೆ ಹುಬ್ಬಳ್ಳಿಗರ ಸ್ಥಿತಿ ಹೇಗಾಗಿದೆ ಎನ್ನುವುದು ನಿಮಗೆ ಗೊತ್ತಾಗತ್ತೆ. ಅರಳಿಹೊಂಡದಲ್ಲಿ ಬಿಡಾಡಿ ದನವೊಂದು ಯುವಕನೋರ್ವನಿಗೆ ತಿವಿದು ತೀವ್ರ ಗಾಯಗೊಳಿಸಿದೆ. ಜನರು ರಸ್ತೆಯಲ್ಲಿ ಸಂಚರಿಸುವಾಗ ಬಿಡಾಡಿ ದನಗಳ ಹಾವಳಿ ಈ ಮಟ್ಟಕ್ಕೆ ಹೆಚ್ಚಾಗಿದೆ. ಆದರೆ, ಮಹಾನಗರ ಪಾಲಿಕೆ ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಕಾಲಹರಣ ಮಾಡುತ್ತಿದ್ದಾರೆ.
ಜನಪ್ರತಿನಿಧಿಗಳಂತೂ ಹೇಳೋದೆ ಬೇಡಾ ಬಿಡಿ. ಅವರಿಗೂ ಜನರಿಗೂ ಸಂಪರ್ಕ ಬರುವುದು ಚುನಾವಣೆ ಸಮಯದಲ್ಲಿ ಮಾತ್ರ. ಜೀವ ಹೋದ ಮೇಲೆ, ಮನೆಗೊಂದು ಭೇಟಿ, ಸಾಂತ್ವನ, ಸರಕಾರದ ಪರಿಹಾರ.. ಇಷ್ಟೇ..
ಕುಟುಂಬಕ್ಕೆ ಆಸರೆಯಾದವರ ಜೀವ ಉಳಿಸುವುದಕ್ಕೆ ಯಾರೂ ಮುಂದಾಗುತ್ತಿಲ್ಲ. ಮಹಾನಗರ ಪಾಲಿಕೆ, ಈಗಲಾದರೂ ಎಚ್ಚೆತ್ತು ಈ ಬಿಡಾಡಿ ದನಗಳ ಹಾವಳಿಯನ್ನ ಕಡಿಮೆ ಮಾಡಬೇಕಿದೆ.