ವರ್ಕಿಂಗ್ ಬೀಟ್ ಪೇದೆಯ ‘ವಿಕ್ರಮ’- ಸಿಕ್ಕವರೆಷ್ಟು ನಟೋರಿಯಸ್ ಇದ್ರೂ ಗೊತ್ತಾ..!
1 min readಹುಬ್ಬಳ್ಳಿ: ಅವಳಿನಗರದಲ್ಲಿ ಎಲ್ಲರೂ ಮಲಗಿದ್ದರೂ ಪೊಲೀಸರು ಮಲಗಿರೋದಿಲ್ಲ. ಅವರಿಗೆ ಜನರ ನೆಮ್ಮದಿ ಮುಖ್ಯ. ಹಾಗಾಗಿಯೇ ತಡರಾತ್ರಿ 1ಗಂಟೆಯಿಂದ ಬೆಳಗಿನ ಜಾವದ 6ಗಂಟೆಯವರೆಗೆ ವರ್ಕಿಂಗ್ ಬೀಟ್ ಎಂದು ಕರೆಯುವ ಡ್ಯೂಟಿಯಲ್ಲಿ ಪೊಲೀಸರು ಕರ್ತವ್ಯ ಸಲ್ಲಿಸುತ್ತಿರುತ್ತಾರೆ. ಆ ಪೊಲೀಸರು ಕೂಡಾ ಸಾಮಾನ್ಯವಾಗಿ ಯೂನಿಫಾರ್ಮ್ ಹಾಕಿಕೊಂಡಿರಲ್ಲ. ರಾತ್ರಿ ಡ್ಯೂಟಿ ಮಾಡುವವರು ಎಷ್ಟೊಂದು ಜಾಣಾಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದಕ್ಕೆ ಇಲ್ಲೊಂದು ಪ್ರಕರಣವನ್ನ ನಿಮಗೆ ವಿವರಿಸುತ್ತೇವೆ.. ಪೂರ್ಣ ಓದಿ..
ಹುಬ್ಬಳ್ಳಿ ನವನಗರದಲ್ಲಿರೋ ಎಪಿಎಂಸಿ ಠಾಣೆಯಲ್ಲಿರುವ ಪೊಲೀಸ್ ರೋರ್ವರು ಬೀಟ್ ಕರ್ತವ್ಯದಲ್ಲಿದ್ದಾಗಲೇ ಬೈಕನ್ನ ನೋಡ್ತಾರೆ. ಇದು ಈ ಭಾಗದಲ್ಲವೆಂದು ಸಂಶಯ ಬಂದು ನೋಡಿದ್ರೇ, ಪಕ್ಕದಲ್ಲಿರೋ ಬಾರೊಂದರ ಮೂಲೆಯಲ್ಲಿ ಅಡಗಿಕೊಂಡು ಕೆಲವರು ಕೂತಿರ್ತಾರೆ. ತಕ್ಷಣವೇ, ಸಮೀಪದಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಿ, ಅವರ ನಡುವೆಯೇ ಹೋಗಿ ಕುಳಿತುಕೊಂಡು, ಇಬ್ಬರ ಕಾಲರ್ ಗಟ್ಟಿಯಾಗಿ ಹಿಡಿದುಕೊಂಡ ಬೀಟ್ ಪೊಲೀಸ್, ತಕ್ಷಣವೇ ಯಾರೂ ಮೇಲೆಳದಂತೆ ನೋಡಿಕೊಂಡಿದ್ದಾರೆ.
ಮೊದಲು ಎಷ್ಟು ಜನರಿದ್ದಾರೆಂದು ಗೊತ್ತೆಯಿಲ್ಲದೇ ನುಗ್ಗಿದ ಆ ಪೊಲೀಸ್, ಇಬ್ಬರನ್ನ ನೋಡಿ ಹಿಡಿದಾಗ ಅಲ್ಲಿದ್ದವರು ಇಬ್ಬರಾಗಲಿಲ್ಲ. ಐವರಿದ್ದರು.. ಆದರೂ, ಗಟ್ಟಿಯಾಗಿ ಕುಳಿತ ಪೊಲೀಸ್ ಪೇದೆ ಹಿಡಿದವರನ್ನ ಮೇಲೆಳುವಂತೆ ಮಾಡಬೇಕೆನುಷ್ಟರಲ್ಲಿ ಇನ್ನುಳಿದ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನ ಬಂಧಿಸಿದಾಗ, ಅವರೆಷ್ಟು ನಟೋರಿಯಸ್ ಇದ್ದಾರೆಂದು ಗೊತ್ತಾಗಿದೆ.
ಬಂಧಿತರ ಬಗ್ಗೆ ತಿಳಿದುಕೊಂಡಾಗ ರಾಮಲಿಂಗೇಶ್ವರ ನಗರದ ನಿವಾಸಿ ಕುಮಾರ ಅಲಿಯಾಸ್ ಕುಮ್ಯಾ ರಾಮಣ್ಣ ವಡ್ಡರ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಿರಣ ರವಿ, ರಾಮನಗರ ಕನಕಪುರ ಜಿಲ್ಲೆತ ಸಂಜೀವ ಕೆಂಚಪ್ಪ, ಕನಕಪುರದ ಶಿವಕುಮಾರ ಬಚ್ಚೇಗೌಡ ಹಾಗೂ ಹೊಳೆನರಸಿಪುರದ ದೀಪಕ ಎಚ್.ಎಸ್. ಎಂದು ಗೊತ್ತಾಗಿದೆ.
ಅಂದ ಹಾಗೇ ಅಷ್ಟೇಲ್ಲಾ ಚಾಣಾಕ್ಷತನ ತೋರಿದ್ದು, ಅಂದು ಬೀಟ್ ಕರ್ತವ್ಯದಲ್ಲಿದ್ದ ವಿಕ್ರಮ ಪಾಟೀಲ. ಇಂತಹ ಪೊಲೀಸರು ಇರುವುದರಿಂದಲೇ ಜನ ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವಿದೆ.
ಬಂಧಿತರಿಂದ 70ಸಾವಿರ ಮೌಲ್ಯದ ಎರಡು ಬೈಕ್, ಖಾರದ ಪುಡಿ ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ಸೆಪೆಕ್ಟರ್ ಪ್ರಭು ಸೂರಿನ್, ಪಿಎಸ್ಐ ಎಸ್.ಎಸ್.ಜಕ್ಕನಗೌಡ್ರ, ಎಎಸ್ಐ ಆರ್.ಎ.ಸೂಡಿ, ಸಿಬ್ಬಂದಿಗಳಾದ ಎಂ.ಜಿ.ರಕ್ಕಸಗಿ, ಎಚ್.ಬಿ.ಬೆನಕನಹಳ್ಳಿ, ವಿಕ್ರಮ ಪಾಟೀಲ, ಎಸ್.ಎಸ್.ಮೇತ್ರಿ, ಬಿ.ಎನ್.ರಾಠೋಡ, ಎಸ್.ಎಂ.ದಿಡ್ಡಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.