ವಾಣಿಜ್ಯನಗರಿಯಲ್ಲಿ ಎರಡು ಬೈಕ್- ಗೂಡ್ಸ್ ಲಾರಿ ಕಳ್ಳತನ

ಹುಬ್ಬಳ್ಳಿ: ನಗರದಲ್ಲಿ ಬೈಕ್ ಕಳ್ಳತನ ಮುಂದುವರೆದಿದ್ದು, ಇದೀಗ ಲಾರಿಯನ್ನೂ ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಾಹನ ಮಾಲೀಕರು ಜಾಗೃತೆಯಿಂದ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಹುಬ್ಬಳ್ಳಿ ಅಂಚಟಗೇರಿ ಓಣಿಯ ಸುನೀಲ ಅಶೋಕ ಅಂಚಟಗೇರಿ ಎಂಬುವವರಿಗೆ ಸೇರಿದ ಬಜಾಜ್ ಪ್ಲಾಟಿನಂ ವಾಹನವನ್ನ ಮನೆ ಮುಂದೆ ನಿಲ್ಲಿಸಿದಾಗ ಕಳ್ಳತನ ಮಾಡಲಾಗಿದೆ ಎಂದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ಗಬ್ಬೂರ ಕಮಾನ್ ಹತ್ತಿರ ನಿಲ್ಲಿಸಿದ ಕೆಎ-26, ಎ-1350 ಸಂಖ್ಯೆಯ ಆರು ಗಾಲಿಯ ಗೂಡ್ಸ್ ಲಾರಿಯನ್ನ ಕದ್ದೋಯ್ಯಲಾಗಿದೆ ಎಂದು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹುಬ್ಬಳ್ಳಿ ವಿದ್ಯಾನಗರದ ಅಜಿತ ರುದ್ರಪ್ಪ ನರಿಯವರ ಎಂಬುವವರಿಗೆ ಸೇರಿದ ಹಿರೋ ಹೊಂಡಾ ದ್ವಿಚಕ್ರ ವಾಹನವನ್ನ ಕಿಮ್ಸ್ ಆಸ್ಪತ್ರೆ ಆವರಣದಲ್ಲಿದ್ದಾಗ ಕಳ್ಳತನ ಮಾಡಲಾಗಿದೆ ಎಂದು ವಿದ್ಯಾನಗರ ಠಾಣೆಯಲ್ಲಿ ದೂರನ್ನ ನೀಡಲಾಗಿದೆ.
ನಿನ್ನೆ ದಿನಾಂಕ 30.09.2020 ರಂದು ಸಂಚಾರ ನಿಯಮಗಳನ್ನ ಉಲ್ಲಂಘನೆ ಮಾಡಿದವರ ಮೇಲೆ 562 ಪ್ರಕರಣಗಳನ್ನ ದಾಖಲು ಮಾಡಲಾಗಿದ್ದು, 2ಲಕ್ಷ 92600 ರೂಪಾಯಿಗಳ ದಂಡ ವಿಧಿಸಲಾಗಿದೆ.