Posts Slider

Karnataka Voice

Latest Kannada News

ಧಾರವಾಡ: ಮರಾಠಾ ವಿದ್ಯಾಪ್ರಸಾರಕ ಮಂಡಳಿ ಚುನಾವಣೆಯಲ್ಲಿ ಗೋಲ್‌ಮಾಲ್…!?

Spread the love

ಧಾರವಾಡ: ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಮರಾಠಾ ವಿದ್ಯಾಪ್ರಸಾರಕ ಮಂಡಳದ ಚುನಾವಣೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಸದಸ್ಯರು ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.

ಚುನಾವಣೆಯ ಮತದಾನದ ವೇಳೆಯಲ್ಲಿ ಮತದಾನ ಮಾಡಿದ ಸಂಖ್ಯೆಗೂ, ಮತ ಎಣಿಕೆಯಾದ ಸಂಖ್ಯೆಗೂ ಹೊಂದಾಣಿಕೆಯಾಗಿಲ್ಲ. ಇದರಲ್ಲಿ ಅಕ್ರಮ ನಡರದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಲಾಗಿದೆ.

ಈ ಗೊಂದಲವಿದ್ದಾಗಲೇ ಚುನಾವಣೆಯಲ್ಲಿ ಗೆದ್ದವರಾದವರು ಸದಸ್ಯರ ಸಮ್ಮುಖದಲ್ಲಿ ಪ್ರಮಾಣ ಪತ್ರ ಪಡೆಯುವ ಬದಲಾಗಿ, ಮುಚ್ಚಿದ ಬಾಗಿಲಿನಲ್ಲಿ ಪಡೆದುಕೊಂಡು ಪೋಟೊಗಳನ್ನ ಹರಿಬಿಟ್ಟಿದ್ದಾರೆಂದು ಹೇಳಲಾಗಿದೆ.

ಸದಸ್ಯರೇ ಆರೋಪ ಮಾಡಿದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಮತದಾನದ ಪತ್ರಗಳನ್ನ ಕಾಯ್ದಿರಿಸಿದೆ ಅವುಗಳನ್ನ ಪ್ಲಾಸ್ಟಿಕ್ ಬ್ಯಾಗಿನಲ್ಲಿಟ್ಟು ಹೊರಗಿಡಲಾಗಿದ್ದು, ಸಂಶಯ ಮತ್ತಷ್ಟು ಬಲಗೊಳ್ಳುವಂತಾಗಿದೆ ಅಂತಾರೆ ದೂರು ನೀಡಿದವರು.


Spread the love

Leave a Reply

Your email address will not be published. Required fields are marked *