ಧಾರವಾಡ: ಚಿನ್ನದ ಬೇಟೆಯಲ್ಲಿ ಕೆಜಿಗಟ್ಟಲೇ “ಬಂಗಾರ-ಬೆಳ್ಳಿ” ವಶ- ಎಸಿಪಿ ಒಡೆಯರ್, ಇನ್ಸಪೆಕ್ಟರ್ ಗಂಗೇನಹಳ್ಳಿ, ದಿಡಿಗನಾಳ ‘ಮಿಂಚಿನ ಕಾರ್ಯಾಚರಣೆ’…!!!!
1 min readಸಿಸಿಬಿ, ವಿದ್ಯಾಗಿರಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನಾಭರಣ ಸೀಜ್
ಹುಬ್ಬಳ್ಳಿ: ಬೇರೆ ರಾಜ್ಯದಿಂದ ದಾಖಲೆಗಳು ಇಲ್ಲದೆ ಚಿನ್ನವನ್ನು ತಂದು ಅವಳಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಎಸಿಪಿ ಒಡೆಯರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿ ಹಾಗೂ ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ತಂಡ ದಾಳಿ ಮಾಡಿ ಓರ್ವನನ್ನ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿರುವ ಘಟನೆ ಎಸ್‌ಡಿಎಂ ಕಾಲೇಜ್ ಬಳಿ ಸಂಭವಿಸಿದೆ.
ವೀಡಿಯೋ ಇದೆ ಪೂರ್ಣವಾಗಿ ನೋಡಿ…
ಮಹಾರಾಷ್ಟ್ರದಿಂದ ಖಾಸಗಿ ಬಸ್’ನ ಮುಖಾಂತರ ಚಿನ್ನ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಧಾರವಾಡದ ಎಸ್‌ಡಿಎಂ ಕಾಲೇಜು ಬಳಿಯಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಅಭಿಷೇಕ ಎಂಬಾತನನ್ನು ವಶಕ್ಕೇ ಪಡೆದು ವಿಚಾರಣೆ ನಡೆಸಿದಾಗ ದಾಖಲೆಗಳು ಇಲ್ಲದೆ ಸಾಗಾಟದ 1 ಕೆಜಿಗೂ ಅಧಿಕ ಚಿನ್ನ ಹಾಗೂ 1 ಕೆಜಿ ಅಧಿಕ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ನಂದಗಾವಿ ಹೇಳಿದರು.
ಕರ್ನಾಟಕವಾಯ್ಸ್.ಕಾಂನಲ್ಲಿ ನಿನ್ನೆ ಪ್ರಸಾರವಾಗಿದ್ದ ತನಿಖೆ ವೇಳೆಯ ವೀಡಿಯೋ..
ಅಕ್ರಮ ಚಿನ್ನ ಸಾಗಾಟದ ಆರೋಪದಡಿಯಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅಭಿಷೇಕ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಚಿನ್ನ ಸಾಗಾಟದಲ್ಲಿ ಹಲವರು ಭಾಗಿಯಾಗಿರುವ ಶಂಕೆಯಿದ್ದು ತನಿಖೆಯನ್ನು ಮುಂದುವರೆಸಿದ್ದಾರೆ.