ನಿವೃತ್ತ ಹೆಡ್ಮಾಸ್ಥರ ಮನೆಯಲ್ಲಿ ಉಜಾಲಾ ಹೆಸರಿನಲ್ಲಿ ಚಿನ್ನ ಲೂಟಿ..!

ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಮದಲ್ಲಿ ಚಿನ್ನವನ್ನ ಪಾಲಿಶ್ ಮಾಡುವುದಾಗಿ ಹೇಳಿ 1ಲಕ್ಷ 40 ಸಾವಿರ ರೂಪಾಯಿ ಮೌಲ್ಯದ ಚಿನ್ನವನ್ನ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿಯ ಚೆನ್ನಪೇಟೆಯಲ್ಲಿ ನಡೆದ ಘಟನೆಯ ದಿನವೇ ಈ ಘಟನೆಯೂ ನಡೆದಿದ್ದು, ಹುಬ್ಬಳ್ಳಿಯಲ್ಲಿ ಹೇಳಿದ ಹಾಗೇ ವರೂರಿನಲ್ಲಿಯೂ ಉಜಾಲಾ ಹೆಸರಿನಲ್ಲಿಯೇ ಆರೋಪಿ ಒಳಗೆ ಬಂದಿದ್ದಾನೆ.
ವರೂರು ಗ್ರಾಮದ ಸರಕಾರಿ ಶಾಲೆಯ ನಿವೃತ್ತ ಶಿಕ್ಷಕ ವಾಸುದೇವ ಗುರುಭಟ್ ಜೋಶಿ ಎಂಬುವವರ ಮನೆಯಲ್ಲಿಯೇ 36 ಗ್ರಾಂ ಚಿನ್ನಾಭರಣವನ್ನ ಪಾಲಿಶ್ ಮಾಡುವ ನೆಪದಲ್ಲಿ ದೋಚಲಾಗಿದೆ. ಇದರಲ್ಲಿ 18 ಗ್ರಾಂದ ಬಂಗಾರದ ಚೈನ್ ಮತ್ತು 18 ಗ್ರಾಂದ ಮಂಗಳಸೂತ್ರವಿದೆ ಎಂದು ದೂರಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ರೇಖಾಚಿತ್ರವನ್ನ ಪೊಲೀಸರು ಬಿಡುಗಡೆ ಮಾಡಿದ್ದಾರೆ.