ಹುಬ್ಬಳ್ಳಿ: ED ಹೆಸರಲ್ಲಿ “ಮೂರ್ಕೆಜಿ ಚಿನ್ನ” ದೋಚಿದ್ದ ಪ್ರಕರಣದಲ್ಲಿ 56 ಗ್ರಾಂ ವಶ, ನಾಲ್ವರ ಬಂಧನ…!!!
ಹುಬ್ಬಳ್ಳಿ: ಇಡಿ ಅಧಿಕಾರಿಗಳ ಹೆಸರಲ್ಲಿ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣದಲ್ಲಿ ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈನ ಅಂಕುಶ ಕದಂ, ಚಂದ್ರಶೇಖರ ಅಲಿಯಾಸ್ ರಾಕೇಶ ಜಾಧವ, ವಿಲಾಸ ಮೋಹಿತೆ ಹಾಗೂ ಗುಜರಾತ್ ವಡೋದರಾದ ಜಿಜ್ಞೆಶ್ ಕುಮಾರ ಬಂಧಿತರಾಗಿದ್ದಾರೆ.
ಬಂಧಿತರಿಂದ 6,65,284 ರೂ ಬೆಲೆಬಾಳುವ 56.26 ಗ್ರಾಂ ಚಿನ್ನದ ಒಡವೆ, 60 ಸಾವಿರ ರೂ ನಗದು ಮತ್ತು 7 ಮೊಬೈಲ್ ಪೋನ್ ಜಪ್ತಿ ಮಾಡಲಾಗಿದೆ.
ನವೆಂಬರ್ 19 ರಂದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯ ನೀಲಿಜನ್ ರಸ್ತೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯನ್ನು ಬೆದರಿಸಿ 2.942 ಕೆಜಿ ಚಿನ್ನದ ಆಭರಣ ಮತ್ತು 2 ಲಕ್ಷ ರೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.
ಇಡಿ ಹೆಸರಲ್ಲಿ 5-6 ಜನ ಅಪರಿಚಿತರಿಂದ ನಡೆದಿದ್ದ ಕೃತ್ಯದ ಬಗ್ಗೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
