ಹುಬ್ಬಳ್ಳಿಯಲ್ಲಿ “38 ಲಕ್ಷ ರೂ” ಅಕ್ರಮ “ಚಿನ್ನ” ಪತ್ತೆ: ಇಬ್ಬರು ವಶಕ್ಕೆ…
1 min readಹುಬ್ಬಳ್ಳಿ: ದಾಖಲೆಯಿಲ್ಲದೇ ಅಕ್ರಮವಾಗಿ ಚಿನ್ನವನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನ ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಜರಾತ ಮೂಲದ ಮನೀಶ ಹಿಮ್ಮತಲಾಲ ಸೋನಿ ಹಾಗೂ ದರ್ಶನ ಅರವಿಂದಬಾಯಿ ಸೋನಿ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಇವರ ಬಳಿ ದಾಖಲೆಯಿಲ್ಲದಿರುವ 818 ಗ್ರಾಂ ಚಿನ್ನ ಪತ್ತೆಯಾಗಿದೆ.
ಇನ್ಸಪೆಕ್ಟರ್ ರವಿಚಂದ್ರ ಬಡಫಕ್ಕೀರಪ್ಪನವರ ನೇತೃತ್ವದಲ್ಲಿ ಪಿಎಸ್ಐ ಕವಿತಾ ಎಸ್.ಎಂ ಸೇರಿದಂತೆ ಸಿಬ್ಬಂದಿಗಳು ಆರೋಪಿಯನ್ನ ಬಂಧನ ಮಾಡುವಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.