ಗೋವಾ ಕ್ಯಾಶಿನೋ ರಗಳೆ ಹುಬ್ಬಳ್ಳಿಯಲ್ಲಿ: ನಂದು ವ್ಯವಹಾರವಿಲ್ಲ-ಗಿರೀಶ ಗದಿಗೆಪ್ಪಗೌಡರ, ಅವರೇ ನಮ್ಮ ಪಾರ್ಟನರ್: ರಾಮತೀರ್ಥ…!
1 min readಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಗಿರೀಶ ಗದಿಗೆಪ್ಪಗೌಡರ ತಾವೂ ಕ್ಯಾಶಿನೋದಲ್ಲಿ ವ್ಯವಹಾರವನ್ನೇ ಹೊಂದಿಲ್ಲ. ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಫುಡ್ ಸಪ್ಲಾಯ್ ಮತ್ತು ಅರಣ್ಯ ಇಲಾಖೆಯ ಕೆಲಸವನ್ನಷ್ಟೇ ಮಾಡುತ್ತೇನೆ ಎಂದು ಹೇಳುತ್ತಿದ್ದು, ಇದಕ್ಕೆ ರಾಮತೀರ್ಥ ಐರಸಂಗ ಬೇರೆಯದನ್ನೇ ಹೇಳುತ್ತಿದ್ದಾರೆ. ಗಿರೀಶ ಗದಿಗೆಪ್ಪಗೌಡರ ನಮ್ಮ ಪಾರ್ಟನರ್ ಎಂಬುದಕ್ಕೆ ಹಲವು ಸಾಕ್ಷಿಗಳು ನಮ್ಮಲ್ಲಿವೆ ಎಂದಿದ್ದಾರೆ.
ಇಡೀ ಪ್ರಕರಣ ಮತ್ತು ಬಿಸಿನೆಸ್ ಗೋವಾದಲ್ಲಿದ್ದರೂ, ಜಗಳ ಎಫ್ಐಆರ್ ಗಳು ಮಾತ್ರ ಹುಬ್ಬಳ್ಳಿಯಲ್ಲಿ ಆಗುತ್ತಿವೆ. ಜನರ ವಂಚನೆಗೆ ಕ್ಯಾಶಿನೋಗಳು ಕಾರಣವಾಗುತ್ತಿವೆ ಎಂದು ಜನ ಮಾತನಾಡಿಕೊಳ್ಳುತ್ತಿರುವ ಸಮಯದಲ್ಲಿಯೇ ಕ್ಯಾಶಿನೋ ‘ಹಲಾಲುಕೋರ’ತನ ಹುಬ್ಬಳ್ಳಿಯಲ್ಲಿ ಕಂಡು ಬರುತ್ತಿದೆ.
ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದ್ದು, ಗಿರೀಶ ಗದಿಗೆಪ್ಪಗೌಡರ ಇಂದು ಮಾಧ್ಯಮದಗಳ ಮುಂದೆ ಪ್ರತ್ಯಕ್ಷವಾಗಿ, ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಮಾತನಾಡಿದರು.
ಪೂರ್ಣವಾಗಿ ನೋಡಿ..
ಇದಕ್ಕೆ ತಕ್ಕ ಉತ್ತರವನ್ನ ಗಿರೀಶ ಗದಿಗೆಪ್ಪಗೌಡರಿಗೆ ಹಣವನ್ನ ಅಕೌಂಟ್ ಮೂಲಕ ಹಾಕಿದ್ದೇನೆ ಎನ್ನುವ ಮೂಲಕ, ಕ್ಯಾಶಿನೋದ ವ್ಯವಹಾರದಲ್ಲಿ ಗಿರೀಶ ಗದಿಗೆಪ್ಪಗೌಡರ ಇದ್ದಾರೆಂದು, ರಾಮತೀರ್ಥ ಹೇಳುತ್ತಾನೆ.
ವಾಣಿಜ್ಯನಗರಿಯಲ್ಲಿನ ಹಣವಂತರು ಕ್ಯಾಶಿನೋದಲ್ಲಿ ಹಣವನ್ನ ಹೂಡಿ, ಇಲ್ಲಿನವರನ್ನೇ ಕರೆದುಕೊಂಡು ಹೋಗಿ ಅಂದರ್-ಬಾಹರ್ ಆಡಿಸಿ, ಹಣವನ್ನ ಕಳೆದುಕೊಳ್ಳುವಂತೆ ಮಾಡಿ, ಅಲ್ಲಿಯೇ ಕಮೀಷನ್ ಮೂಲಕ ಲಕ್ಷಾಂತರ ರೂಪಾಯಿಗಳನ್ನ ದೋಚುತ್ತಿರುವುದು ಮೊದಲ್ಲೇಲ್ಲ ಕೇಳಿ ಬರುತ್ತಿತ್ತು. ಅದೀಗ ನಿಜವಾಗುತ್ತಿದೆ.