ಹಾಡುಹಗಲೇ ಚೂರಿ: ರಕ್ತದ ಮಡುವಿನಲ್ಲಿದ್ದರೂ “ಹೊಳ್ಳಿ” ನೋಡದ ಜನ- ಯುವಕ ಏನಾದ ಗೊತ್ತಾ…?
ಕಲಬುರಗಿ: ಪಲ್ಸರ್ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡುಹಗಲೇ ಯುವಕನನ್ನ ಇರಿದು ಕೊಲೆ ಮಾಡಿರುವ ಘಟನೆ ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ನಡೆದಿದೆ.
ವೀರೇಶ ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಮೂವರು ಕ್ಷಣಾರ್ಧದಲ್ಲಿ ಮಾಯವಾಗಿದ್ದಾರೆ. ಇರಿತದಿಂದ ರಕ್ತದ ಮಡುವಿನಲ್ಲೇ ವೀರೇಶ ಬಿದ್ದಿದ್ದರೂ ಯಾರೋಬ್ಬರು ಆಸ್ಪತ್ರೆಗೆ ದಾಖಲಿಸಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ರಕ್ತದಲ್ಲಿ ಬಿದ್ದಿದ್ದ ವೀರೇಶ ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಅಂಗಲಾಚುತ್ತಿದ್ದರೂ ಯಾರೂ ಆತನಿಗೆ ಸಹಾಯ ಮಾಡಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪೂರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.