ಗಿರ್ಮಿಟಗೆ ಬ್ಯಾರಿಕೇಡ್ ಬಳಕೆ: ಕಣ್ಣು ಮುಚ್ಚಿ ಕುಳಿತ ಪೊಲೀಸರು..
ಹುಬ್ಬಳ್ಳಿ: ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೊಲೀಸರು ಬ್ಯಾರಿಕೇಡಗಳನ್ನ ಬಳಕೆ ಮಾಡುತ್ತಾರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೇ, ಇಲ್ಲೋಬ್ಬ ಭೂಪ ಪೊಲೀಸ್ ಬ್ಯಾರಿಕೇಡಗಳನ್ನೇ ತನ್ನ ಗಿರ್ಮಿಟ್ ಅಂಗಡಿಗಳಿಗೆ ಕಾವಲು ಹಾಕಿಕೊಂಡಿದ್ದಾನೆ.
ಹುಬ್ಬಳ್ಳಿ ಸಿಟಿ ಕ್ಲಿನಿಕ್ ಬಳಿಯೇ ಇಂತಹದೊಂದು ಆಟಾಟೋಪಕ್ಕೆ ಇಳಿದಿರುವ ಗಿರ್ಮಿಟ್ ಮಾರುವಾತ, ಪೊಲೀಸರ ಬ್ಯಾರಿಕೇಡಗಳನ್ನೇ ಗಿರಾಕಿಗಳಿಂದ ದೂರವುಳಿಯಲು ಬಳಕೆ ಮಾಡಿಕೊಳ್ಳುತ್ತಿದ್ದಾನೆ.
ಸುಮಾರು ಎಂಟು ಬ್ಯಾರಿಕೇಡಗಳನ್ನ ತನ್ನದೇ ಅಂಗಡಿಯ ಸುತ್ತಲೂ ಇಟ್ಟುಕೊಂಡು ಸಂಜೆಯಾಯಿತಂದರೇ ವ್ಯಾಪಾರ ಶುರು ಮಾಡುತ್ತಾನೆ. ಕೆಲವು ಪೊಲೀಸರು ಇದನ್ನ ನೋಡಿದರೂ ನೋಡದ ಹಾಗೇ ಹೋಗುತ್ತಿರುವುದು ಸೋಜಿಗದ ವಿಚಾರವೇ ಸರಿ.
ಕೊರೋನಾ ಸಮಯದಲ್ಲಿಯೂ ಪೊಲೀಸರ ಬ್ಯಾರಿಕೇಡಗಳನ್ನೇ ಬಳಕೆ ಮಾಡಿಕೊಳ್ಳುತ್ತಿರುವ ಗಿರ್ಮಿಟ್ ಅಣ್ಣನಿಗೆ ಪೊಲೀಸರು ವಿಚಾರಿಸುವುದು ಸೂಕ್ತವಲ್ಲವೇ..!