ಈಗಷ್ಟೇ.. ಹುಡುಗಿಯ ಕಿಡ್ನ್ಯಾಪ್: ಸಿನೇಮಾದ ದೃಶ್ಯವನ್ನ ಬೆಚ್ಚಿಬೀಳೀಸೋ ಎಕ್ಸಕ್ಲೂಸಿವ್ ವೀಡೀಯೋ..
ಕೋಲಾರ: ಗೆಳತಿಯೊಂದಿಗೆ ಅರಾಮಾಗಿ ಹೆಜ್ಜೆ ಹಾಕುತ್ತಿದ್ದ ಯುವತಿಯನ್ನ ಹಾಡುಹಗಲೇ ಇನ್ನೋವ್ವಾ ಕಾರಿನಲ್ಲಿ ಅಪಹರಣ ಮಾಡಿರುವ ಘಟನೆ ಈಗಷ್ಟೇ ನಗರದ ಎಂಬಿ ರಸ್ತೆಯಲ್ಲಿ ಸಂಭವಿಸಿದೆ.
ಯಾವುದೇ ಅಳುಕಿಲ್ಲದೇ ಮಾತನಾಡುತ್ತ ಹೊರಟಿದ್ದ ಯುವತಿಯನ್ನ ಆತನ ಪ್ರೇಮಿ ಬಿಳಿ ಬಣ್ಣದ ಇನ್ನೋವ್ವಾ ಕಾರಿನಲ್ಲಿ ಬಂದು, ಕೆಳಗಿಳಿದು ಆಕೆಯನ್ನ ಹೊತ್ತು ವಾಹನದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ.
ಕಾಲ್ನಡಿಗೆಯಲ್ಲಿ ಜೊತೆಗಿದ್ದ ಆಕೆಯ ಸ್ನೇಹಿತೆ ಘಟನೆಯಿಂದ ಗಾಬರಿಯಾಗಿ ಮನೆಯತ್ತ ದಾಪುಗಾಲು ಹಾಕಿದ್ದಾಳೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಳುಕಿಲ್ಲದೇ ಘಟನೆ ನಡೆದಿರುದು ಆತಂಕ ಸೃಷ್ಟಿಸಿದೆ.
ಕಳೆದ ಕೆಲವು ವರ್ಷಗಳಿಂದಲೂ ಶಿವು ಎಂಬಾತ ಈ ಹುಡುಗಿಯನ್ನ ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದ್ದು, ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿನೀಮಯ ರೀತಿಯಲ್ಲಿ ನಡೆದ ಘಟನೆಯ ಬಗ್ಗೆ ವೈರಲ್ ಆಗಿರುವ ದೃಶ್ಯಗಳನ್ನ ಆಧರಿಸಿ ತನಿಖೆ ಮುಂದುವರೆದಿದೆ.