Exclusive- ಸ್ಮಾರ್ಟ್ ಸಿಟಿ ಅವಘಡ: ಬಾಲಕಿ ಸಾವು, ಮೂವರು ಬಾಲಕರು ಸೇಫ್: ಕಾಪಾಡಿದ್ದು ವಿಕಲಚೇತನ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಸ್ಮಾರ್ಟ್ ಸಿಟಿಯಾಗುವುದರಲ್ಲಿ ಎಷ್ಟು ಪ್ರಾಣಗಳು ಹೋಗಬೇಕಿವೆಯೋ ಯಾರಿಗೆ ಗೊತ್ತಾಗುತ್ತಿಲ್ಲ. ಅಂತಹ ವೈಜ್ಞಾನಿಕವಾಗಿ ಕಾಮಗಾರಿಗಳು ನಡೆಯುತ್ತಿವೆ. ಇಂದು ಕೂಡಾ ದೊಡ್ಡದೊಂದು ಅವಘಡ ಸಂಭವಿಸಿದ್ದು, ನಾಲ್ವರು ನೀರಿನಲ್ಲಿ ಬಿದ್ದು, ಓರ್ವ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯ ಆವರಣದಲ್ಲಿ ನಡೆದಿರುವ ಈ ಘಟನೆಯಲ್ಲಿ ಗಿರಣಿಚಾಳದ ತ್ರಿಶಾ ಎಂಬ ಮುದ್ದು ಬಾಲಕಿ ಸಾವಿಗೀಡಾಗಿದ್ದಾಳೆ. ಇವಳ ಜೊತೆಗೆ ಬಿದ್ದಿದ್ದ ಮೂವರು ಬಾಲಕರನ್ನ ಸ್ಥಳೀಯ ವಿಕಲಚೇತನ ಸುರೇಶ ಹೊರಕೇರಿ ಕಾಪಾಡಿದ್ದು, ಬಾಲಕರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹದಿನೈದು ಅಡಿ ತೆಗ್ಗು ತೆಗೆದು ಹಾಗೇಯೇ ಬಿಟ್ಟಿದ್ದು, ಅದರಲ್ಲಿ ಸಂಪೂರ್ಣವಾಗಿ ನೀರು ತುಂಬಿದೆ. ಆಟವಾಡುತ್ತಲೇ ಎಲ್ಲರೂ ಅದರಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್ ಸುರೇಶ ಹೊರಕೇರಿ ನೋಡಿದ್ದರಿಂದ ಮೂವರು ಬಾಲಕರು ಬದುಕಿದ್ದು, ಇನ್ನುಳಿದ ಬಾಲಕಿಯನ್ನ ಬಚಾವ್ ಮಾಡವಷ್ಟರಲ್ಲೇ ಮಗು ಪ್ರಾಣವನ್ನ ಕಳೆದುಕೊಂಡಿದೆ.
ನಗರದಲ್ಲಿ ಬಂದ್ ಕರೆಯ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈ ಬಗ್ಗೆ ಯಾರಿಗೂ ಗೊತ್ತಾಗಿಲ್ಲ. ನಂತರ ಬಾಲಕಿಯ ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ.