ಗಿರೀಶ ಮಟ್ಟೆಣ್ಣನವರ ತಂದೆ ವಿಧಿವಶ: ನಾಳೆ ಕವಿವಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ

ಧಾರವಾಡ: ಜನಪರ ಕಾಳಜಿ ಹೊಂದಿರುವ ಗಿರೀಶ ಮಟ್ಟೆಣ್ಣನವರ ತಂದೆ ಇಂದು ಸಾಯಂಕಾಲ ನಗರದಲ್ಲಿ ನಿಧನರಾಗಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ನೌಕರರಾಗಿ ವೃತ್ತಿ ಆರಂಭಿಸಿದ್ದ ಲೋಕನಾಥ ಮಟ್ಟೆಣ್ಣನವರ ಇನ್ನಿಲ್ಲವಾಗಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ ವಿಶ್ವವಿದ್ಯಾಲಯದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಈ ಬಗ್ಗೆ ಸ್ವತಃ ಗಿರೀಶ ಮಟ್ಟೆಣ್ಣನವರ ಬರೆದುಕೊಂಡಿದ್ದು ಹೀಗಿದೆ ನೋಡಿ…
ನನ್ನ ತಂದೆ ಶ್ರೀ ಲೋಕನಾಥ S. ಮಟ್ಟೆಣ್ಣವರ ಇಂದು ಸಾಯಂಕಾಲ ತಮ್ಮ ಜೀವನದ ಪಯಣ ಮುಗಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ದಿನಗೂಲಿ ನೌಕರರಾಗಿ ವೃತ್ತಿ ಆರಂಭಿಸಿ, ಕಾರ್ಮಿಕರ ಹೋರಾಟಗಾರರಾಗಿ ಬೆಳೆದು, ನನ್ನಲ್ಲಿಯೂ ಹೋರಾಟದ ಬೀಜ ಬಿತ್ತಿ ಇಂದು ಜೀವನದ ಹೋರಾಟ ಮುಗಿಸಿದ್ದಾರೆ. ನಾಳೆ ಕರ್ಮ ಭೂಮಿ ಕರ್ನಾಟಕ ವಿಶ್ವವಿದ್ಯಾಲಯ ರುದ್ರಭೂಮಿ ಧಾರವಾಡ ದಲ್ಲಿ 12 ಘಂಟೆ ಗೆ ಅಂತ್ಯ ಕ್ರಿಯೆ ಇರುವುದು.
( ಕೋವಿಡ್ ಸಾವು ಅಲ್ಲ )
ನಿಮ್ಮ ಗಿರೀಶ ಮಟ್ಟೆಣ್ಣವರ & family ????????????