ಗದಗ ಜಿಮ್ಸ್ ಅಕೌಂಟ್ ವಿಭಾಗದ ಮಹಿಳೆ ನೇಣಿಗೆ ಶರಣು..!

ಗದಗ: ನಗರದ ಜಿಮ್ಸ್ ಕಾಲೇಜಿನಲ್ಲಿ ಅಕೌಂಟ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ನೇಣಿಗೆ ಶರಣಾದ ಘಟನೆ ಹುಲಕೋಟಿಯ ಹುಡ್ಕೋ ಕಾಲನಿಯಲ್ಲಿ ನಡೆದಿದೆ.
ಕಳೆದ ಐದು ವರ್ಷಗಳಿಂದ ಜಿಮ್ಸನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಸ್ರೀನಭಾನು ಎಂಬ 26 ವಯಸ್ಸಿನ ಮಹಿಳೆಯೇ ನೇಣಿಗೆ ಶರಣಾದ ದುರ್ಧೈವಿಯಾಗಿದ್ದಾರೆ. ನಿನ್ನೆ ಕೂಡಾ ಕೆಲಸಕ್ಕೆ ಹಾಜರಾಗಿ, ಮನೆಗೆ ಮರಳಿದ್ದರು.
ಘಟನೆಯ ಬೆಳಕಿಗೆ ಬರುತ್ತಿದ್ದ ಹಾಗೆ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಡೆತ್ ನೋಟ್ ಹುಡುಕಾಟ ನಡೆಸಿದ್ದರೂ, ಯಾವುದೇ ರೀತಿಯ ಡೆತ್ ನೋಟ್ ಸಿಕ್ಕಿಲ್ಲ. ಇದರಿಂದ ಸಾವಿಗೆ ಹಲವು ಅನುಮಾನಗಳು ಮೂಡಿವೆ.
ಮೊದಲಿಂದಲೂ ನಸ್ರೀನ್ ಭಾನು ಅಕೌಂಟ್ ಸೆಕ್ಷನ್ ದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.