‘ಖಾಟಿಕ್” ಕಲಾಲ ಸಮಾಜವನ್ನ ಪರಿಶಿಷ್ಟ ಜಾತಿಗೆ ಸೇರಿಸಲು ಪ್ರತಿಭಟನೆ…!

ಧಾರವಾಡ: ಖಾಟಿಕ್ ಕಲಾಲ ಸಮಾಜವನ್ನ ಕುಲಶಾಸ್ತ್ರೀಯ ಅಧ್ಯಯನ ಮಾಡಿ, ಕುವೆಂಪು ವಿಶ್ವವಿದ್ಯಾಲಯದ ಪ್ರೋಪೆಸರ್ ಎಂ.ಗುರುಲಿಂಗಯ್ಯನವರು ಕಾಟಿಕ್ ಸಮುದಾಯವನ್ನ ಪರಿಶಿಷ್ಟ ಜಾತಿಗೆ ಸೇರಿಸಲು ವರದಿಯನ್ನ ನೀಡಿದ್ದು, ಅದನ್ನ ಜಾರಿಗೆ ತರಬೇಕೆಂದು ಆಗ್ರಹಿಸಿ ಧಾರವಾಡ ಜಿಲ್ಲಾ ಸೂರ್ವಯವಂಶ ಕ್ಷತ್ರಿಯ ಕಲಾಲ ಖಾಟಿಕ್ ಸಮಾಜ ಧಾರವಾಡದಲ್ಲಿಂದು ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಿದ ಸಮಾಜದ ಜನತೆ, ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಕರ್ನಾಟಕದಲ್ಲಿ ಅತೀ ಸಣ್ಣ ಪ್ರಮಾಣದ ಜನಸಂಖ್ಯೆಯನ್ನ ಹೊಂದಿದ್ದೇವೆ ಎಂದು ಹೇಳಿದರು.
ಸರಕಾರದಲ್ಲಿ ಮೀಸಲಾತಿ ಇಲ್ಲದೇ ಇರುವುದರಿಂದ ಸರಕಾರಿ ನೌಕರಿಗಳು ಸಿಗುತ್ತಿಲ್ಲ. ಶೈಕ್ಷಣಿಕವಾಗಿಯೂ ಹಿಂದೆ ಉಳಿಯುತ್ತಿದ್ದೇವೆ ಎಂದು ಹೇಳಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಲಕ್ಷ್ಮಣ ಗಂಡಗಾಳೇಕರ, ಫಕ್ಕೀರಪ್ಪ ಭಡಂಕರ, ಮನೋಹರ ಡೋಗರೇಕರ, ರಾಮಕೃಷ್ಣ ಭಂಡಕರ, ರಾಜು ಭಂಡಕರ, ನಾಗರಾಜ ಪಟಂಗಕರ, ಪ್ರದೀಪ ಜುಗನೀಖರ, ಅನಿಲ ಕೋಟೇಕರ, ಆನಂದ ಜುಗನೀಕರ, ಮೋಹನ ಕಲಾಲ, ನಾರಾಯಣ ಮೋಟೇಕರ, ವಿಠ್ಠಲ ಚಂದೂಕರ, ಮದನ ಬನೋಖಂಡೆ, ಚಂದ್ರಕಾಂತ ಚಂದೂಕರ, ಟಿ.ವೈ.ಅಂಕುಶಖಾನಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.