ವಿಷಕಾರಿ ಗ್ಯಾಸ್ ಲೀಕ್: 9ಜನರ ಸಾವು: 5ಸಾವಿರಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ
1 min readವಿಶಾಖಪಟ್ಟಣಂ: ಲಾಕ್ಡೌನ್ ಹೊತ್ತಲ್ಲೇ ಘನಘೋರ ಘಟನೆ ನಡೆದಿದ್ದು, ವಿಷಕಾರಿ ಗ್ಯಾಸ್ ಲೀಕ್ನಿಂದ 9 ಮಂದಿ ಸಾವಾಗಿದ್ದು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಸ್ ಲೀಕ್ನಿಂದ 5000ಕ್ಕೂ ಹೆಚ್ಚು ಮಂದಿಗೆ ಆತಂಕ ಎದುರಾಗಿದ್ದು, ವಿಶಾಖಪಟ್ಟಣದಲ್ಲಿ ವಿಷಗಾಳಿಯಿಂದ ಸಾವಿನ ಸರಮಾಲೆ ಆರಂಭವಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿರುವ ದುರಂತ. ಕೆಮಿಕಲ್ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದ ಗ್ಯಾಸ್ ಲೀಕ್. ಗ್ಯಾಸ್ ಲೀಕ್ನಲ್ಲಿ ನಿಂತ-ನಿಂತಲ್ಲೇ ಕುಸಿದು ಬಿದ್ದ ಜನರು. ಬೈಕ್ನಲ್ಲಿ ಹೋಗುತ್ತಿದ್ದವರೂ ಕುಸಿದು ಬಿದ್ದು ತೀವ್ರ ಆತಂಕ. ಸುಮಾರು 5 ಕಿಲೋ ಮೀಟರ್ ದೂರ ಹರಡಿರುವ ಗ್ಯಾಸ್. ಸಾವು-ನೋವಿನ ಸಂಖ್ಯೆಯ ಮತ್ತಷ್ಟು ಹೆಚ್ಚುವ ಆತಂಕ. ಗ್ಯಾಸ್ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಆಘಾತ. ಎಲ್ಜಿ ಪಾಲಿಮರ್ ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆ. ಕೆಮಿಕಲ್ ಪ್ಲಾಂಟ್ನಲ್ಲಿ ಅನಿಲ ಸೋರಿಕೆಯಿಂದ ಘಟನೆ ನಡೆದಿದ್ದು, ಕಂಪನಿ ಸುತ್ತಮುತ್ತಲ ಐದು ಗ್ರಾಮಗಳ ಜನರು ಸ್ಥಳಾಂತರ ಮಾಡಲಾಗುತ್ತಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎನ್ಡಿಎಂಎ ಸಿಬ್ಬಂದಿ. ವೆಂಕಟಾಪುರಂ ಗ್ರಾಮದ ಬಳಿ ಇರುವ ಗ್ಯಾಸ್ ಫ್ಯಾಕ್ಟರಿಯಿಂದ ಭಾರೀ ಪ್ರಮಾಣದಲ್ಲಿ ಜಾನುವಾರು, ಶ್ವಾನ ಸೇರಿ ಪ್ರಾಣಿ, ಪಕ್ಷಿಗಳು ಸಾವು. ಬಾಯಿಗೆ ತೇವದ ಬಟ್ಟೆಗಳನ್ನು ಹಾಕಿಕೊಳ್ಳುವಂತೆ ಸೂಚನೆ. ವಿಷಕಾರಿ ಅಂಶವುಳ್ಳ ಗ್ಯಾಸ್ ಲೀಕ್ನಿಂದ ಹೆಚ್ಚಿದ ಆತಂಕ