‘ಗರೀಬ್ ಮಾಡಿದ ಗರೀಮಾ’- ಬಿಜೆಪಿ ಶಾಸಕರ ಕೈವಾಡ: ನೂರಾರೂ ಕೋಟಿ ವಂಚಕರ ಬಂಧನ

ಹುಬ್ಬಳ್ಳಿ: ಮನೆ ಜಾಗದ ಆಸೆಯನ್ನ ತೋರಿಸಿ ನೂರಾರೂ ಕೋಟಿ ವಂಚನೆ ಮಾಡಿ ಕಣ್ಣು ತಪ್ಪಿಸಿಕೊಂಡು ತಿರುಗುತ್ತಿದ್ದ ವಂಚಕನನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರ ಕಾರ್ಯಕ್ಕೆ ಹಣ ಕಳೆದುಕೊಂಡವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋಸ ನಡೆದದ್ದು ಹೇಗೆ.. ನೊಂದವರ ಮಾತಿದೆ ನೋಡಿ..
ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಗರೀಮಾ ಹೋಮ್ಸ್ ಆ್ಯಂಡ ಫಾರ್ಮ್ ಹೌಸ್ ಲಿಮಿಟೆಡ್ ಹೆಸರಿನಲ್ಲಿ ಕಚೇರಿ ಮಾಡಿಕೊಂಡಿದ್ದ ವಂಚಕರು, ಕಳೆದ ವರ್ಷದಿಂದ ಪರಾರಿಯಾಗಿದ್ದರು. ಕಮೀಷನ್ ಆಧಾರದಲ್ಲಿಯೂ ಹಣ ನೀಡುತ್ತ, ನಂತರ ಜಾಗವನ್ನ ಮನೆಯನ್ನ ನೀಡುವುದಾಗಿ ಮೋಸ ಮಾಡಿದ್ದರು. ಈ ಬಗ್ಗೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದ್ದ ಮೋಸ ಹೋದವರು, ಪೊಲೀಸರ ಕಾರ್ಯಕ್ಷಮತೆಯಿಂದ ನಿರಾಳರಾಗಿದ್ದಾರೆ. ಪ್ರಮುಖ ಆರೋಪಿಯ ಬಂಧನವಾಗಿದೆ.
ಬಂಧನವಾಗಿರುವ ಆರೋಪಿಯು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಸಾತಿಹಾಳ ಗ್ರಾಮದ ರಾಮಯ್ಯ ಗಂಗಯ್ಯ ಹಿರೇಮಠ ಎಂದು ಗುರುತಿಸಲಾಗಿದ್ದು, ನೌಕರಿ ಮಾಡುವವರ ಮನೆಯ ಹೆಣ್ಣು ಮಕ್ಕಳಿಗೆ ಆಸೆ ತೋರಿಸಿ ಅವಳಿನಗರದಲ್ಲಿಯೇ ಕೋಟಿ ಕೋಟಿ ಹಣ ವಂಚನೆ ಮಾಡಿದ್ದಾನೆಂದು ಹೇಳಲಾಗಿದೆ.
ಗರೀಮಾ ಕಂಪನಿಯು ಬಿಜೆಪಿ ಶಾಸಕಿಯದ್ದಾಗಿದ್ದು, ಅವರನ್ನ ಬಂಧನ ಮಾಡಬೇಕೆಂಬ ಕೂಗು ನೊಂದವರಿಂದ ಬಂದಿದೆ. ಈ ಪ್ರಕರಣದಲ್ಲಿ ಹುಬ್ಬಳ್ಳಿ, ಧಾರವಾಡ, ದಾಂಡೇಲಿ, ಯಾದಗಿರಿ, ರಾಯಚೂರು ಸೇರಿದಂತೆ ಹಲವೆಡೆ ಸಾವಿರಾರೂ ಜನರು ಹಣವನ್ನ ಕಳೆದುಕೊಂಡಿದ್ದಾರೆ.
ಸುಮಾರು ಎರಡು ವರ್ಷದ ಸುಧಿರ್ಘ ಅವಧಿಯಲ್ಲೂ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಸುಮ್ಮನೆ ಕೂಡದೇ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಹಣ ಕಳೆದುಕೊಂಡವರು ಪೊಲೀಸರಿಗೆ ಸೆಲ್ಯೂಟ್ ಮಾಡುವಂತಾಗಿದೆ.