ಬಿಜೆಪಿ ಮುಖಂಡನ ರಿವಾಲ್ವರ್ ಪ್ರಕರಣ: 504, 506 ಅಡಿ ನಾಗಪ್ಪ ಗಾಣಿಗೇರ ಮೇಲೆ ಎಫ್ಐಆರ್….!

ಧಾರವಾಡ: ತಾಲೂಕಿನ ಹೊಸ ತೇಗೂರ ಬಳಿ ರಿವಾಲ್ವರ್ ತೆಗೆದು ಗುಂಡು ಹಾರಿಸುವ ಪ್ರಯತ್ನ ಮಾಡಿದ್ದ ಭಾರತೀಯ ಜನತಾ ಪಕ್ಷದ ಮುಖಂಡನ ಮೇಲೆ ಕೊನೆಗೂ ಗರಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹೊಸತೇಗೂರ ಬಳಿ ಮಡಿವಾಳೆಪ್ಪ ಯಲ್ಲಪ್ಪ ಬೆಳವಲದ ಎಂಬುವವರನ್ನ ಕರೆದು ನಾಗಪ್ಪ ಗಾಣಿಗೇರ ಅವಾಚ್ಯವಾಗಿ ನಿಂದಿಸಿ, ಪಿಸ್ತೂಲ್ ತೆಗೆದು ಸೂಟ್ ಮಾಡುವುದಾಗಿ ಹೇಳಿದ್ದರ ಬಗ್ಗೆ ದೂರು ದಾಖಲಾಗಿತ್ತು.
ಈ ಬಗ್ಗೆ ಪ್ರಕರಣ ಗರಗ ಪೊಲೀಸ್ ಠಾಣೆಯಲ್ಲಿ 504 ಹಾಗೂ 506 ಸೆಕ್ಷನ್ ಅಡಿಯಲ್ಲಿ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಎಗ್ ರೈಸ್ ಅಂಗಡಿ ಇಡುವ ಸಂಬಂಧ ನಾಗಪ್ಪ ಮತ್ತು ಮಲಿಕ್ ಎಂಬುವರ ನಡುವೆ ಈ ಜಗಳ ನಡೆದಿತ್ತು. ಈ ಜಗಳ ಬಿಡಿಸಲು ಮಡಿವಾಳಪ್ಪ ಮಧ್ಯೆ ಪ್ರವೇಶಿಸಿದ್ದು ಇದರಿಂದ ಕುಪಿತನಾದ ನಾಗಪ್ಪ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ಮುಖಂಡ ನಾಗಪ್ಪ ಗಾಣಿಗೇರ ಅವರ ಪಿಸ್ತೂಲ್ ಸೀಜ್ ಮಾಡಿ, ಅವರ ಲೈಸೆನ್ಸ್ ರದ್ಧತಿಗೆ ಕ್ರಮ ಜರುಗಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.