Posts Slider

Karnataka Voice

Latest Kannada News

ನರೇಂದ್ರ ಗ್ರಾಪಂ- ಶಾಸಕ ಅಮೃತ ದೇಸಾಯಿ ಸಮ್ಮುಖದಲ್ಲಿ ‘ಕಮಲ’ ಹಿಡಿದ 22 ಸದಸ್ಯರು

1 min read
Spread the love

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮ ಪಂಚಾಯತಿಗೆ ಆಯ್ಕೆಯಾದ 26 ಗ್ರಾಮ ಪಂಚಾಯತ ಸದಸ್ಯರಲ್ಲಿ 22 ಸದಸ್ಯರು ಇಂದು ಅಧಿಕೃತವಾಗಿ ಶಾಸಕ ಅಮೃತ ದೇಸಾಯಿ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿಕೊಂಡರು.

ಇತ್ತೀಚಿಗಷ್ಟೇ ಗ್ರಾಮ ಪಂಚಾಯತಿಗೆ ಆಯ್ಕೆಯಾದ  ನೂತನ 22 ಗ್ರಾಮ ಪಂಚಾಯತನ ಸದಸ್ಯರು ಇಂದು ಧಾರವಾಡದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿಯವರ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.  ನರೇಂದ್ರ ಗ್ರಾಮ ಪಂಚಾಯತ 26 ಸದಸ್ಯರಲ್ಲಿ 22 ಸದಸ್ಯರು ಇಂದು ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ ಅವರ ಗೃಹ ಕಚೇರಿಯಲ್ಲಿ ಸೇರ್ಪಡೆಯಾದರು.

ಶಾಸಕರು ಬಿಜೆಪಿ ಪಕ್ಷಕ್ಕೆ ಬಂದ ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಧ್ವಜ ನೀಡಿ ಶಾಲು ಹಾಕಿ ಎಲ್ಲರನ್ನೂ ಬರಮಾಡಿಕೊಂಡರು. ಈ ಮೂಲಕ ಅಧಿಕೃತವಾಗಿ ಇಂದು ಸೇರಿಕೊಂಡರು. ಗೃಹ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ 22 ಸದಸ್ಯರನ್ನು ಶಾಸಕರು ಬಿಜೆಪಿ ಪಕ್ಷಕ್ಕೆ ಈಮೂಲಕ ಆಹ್ವಾನಿಸಿದರು.

ಬಿಜೆಪಿ ಪಕ್ಷಕ್ಕೆ ಸೇರಿದ ಗ್ರಾಮ ಪಂಚಾಯತ ಸದಸ್ಯರಾದ ಆತ್ಮಾನಂದ ಹುಂಬೇರಿ, ಮಲ್ಲವ್ವ ವಾಲಿಕಾರ, ಮುತ್ತು ಕೆಲಗೇರಿ, ಮಂಜುಳಾ ತೇಗೂರ, ನಾಗರಾಜ ಹೊಟ್ಟಿಹೊಳಿ,ರಾಯನಗೌಡ ಚ ಪಾಟೀಲ, ತಿರಕಯ್ಯ ಹಿರೇಮಠ, ನೀಲವ್ವ ನೇಕಾರ, ಶಂಕ್ರೆವ್ವ ಹಡಪದ,ಬಸವರಾಜ ಪಮ್ಮನ್ನವರ, ಕಲ್ವವ್ವ ತಿಪ್ಪನ್ನವರ,ಅಪ್ಪಣ್ಣ ಹಡಪದ,ಗಂಗವ್ವ ಮಾಯನ್ನವರ,ಲಕ್ಷ್ಮೀ ಶಿಂಧೆ,ನೇತ್ರಾ ಚಲವಾದಿ,ಸಂಗಪ್ಪ ಆಯಟ್ಟಿ, ಶಾಂತವ್ವ ಗಾಣಿಗೇರ, ಈಶ್ವರ ತೋಟಗೇರ, ಶಾಂತವ್ವ ಮಲ್ಲನಗೌಡ ಪಾಟೀಲ,ಅರ್ಜುನಗೌಡ ಪಾಟೀಲ,ಶಾಂತವ್ವ ಬಸನಗೌಡ ಪಾಟೀಲ ಸೇರ್ಪಡೆಗೊಂಡರು. ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಘಟಕದ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೋಮಾರದೇಸಾಯಿ, ಅವರೊಂದಿಗೆ  ಚನ್ನವೀರಗೌಡ ಪಾಟೀಲ, ಶ್ರೀಕಾಂತ ಮುತಾಲಿಕ ದೇಸಾಯಿ, ವಿಜಯ ದೇಶಮುಖ, ಈಶ್ವರ ಗಾಣಿಗೇರ, ಮಹಾದೇವಪ್ಪ ತಿಪ್ಪನ್ನವರ, ಸಿದ್ದನಗೌಡ ಪಾಟೀಲ ಶಿವಮೂರ್ತಿ ಅಂಬನ್ನವರ , ಭೀಮಶಿ ವಾಲಿಕಾರ, ಮಂಜುನಾಥ ಈಳಿಗೇರಿ,ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed