ಧಾರವಾಡದ ಬಳಿ ಗರಗ ಠಾಣೆ CPI ಶಿವಯೋಗಿ ಲೋಹಾರ ಟೀಂನಿಂದ “ಬೃಹತ್ ಬೇಟೆ”…!!!
ಧಾರವಾಡ: ಸಿನೀಮಯ ರೀತಿಯಲ್ಲಿ ರಾತ್ರಿಯಿಂದಲೂ ಹೊಂಚು ಹಾಕಿ ಕುಳಿತಿದ್ದ ಗರಗ ಠಾಣೆಯ ಪೊಲೀಸ್ ಪಡೆ, ಬೃಹತ್ ಜಾಲವೊಂದನ್ನ ಪತ್ತೆ ಹಚ್ಚಿದ್ದು, ದಶಕಗಳ ನಂತರ ಜಿಲ್ಲೆಯಲ್ಲಿ ಬಹುದೊಡ್ಡ ಬೇಟೆಯಾಗಿದೆ.
ಹೌದು… ಗರಗ ಠಾಣೆಯ ಸಿಪಿಐ ಶಿವಯೋಗಿ ಲೋಹಾರ ಹಾಗೂ ಗರಗ ಠಾಣೆಯ ಪಿಎಸ್ಐ ತಂಡ ತಡರಾತ್ರಿಯ ಸಮಯದಲ್ಲಿ ಬರೋಬ್ಬರಿ 25 ಸಾವಿರ ಲೀಟರ್ ಸ್ಪಿರಿಟ್ ಸಾಗಿಸುತ್ತಿದ್ದ ಎರಡು ಟ್ಯಾಂಕರಗಳನ್ನ ಪತ್ತೆ ಹಚ್ಚಿದ್ದು ತಿಳಿದು ಬಂದಿದೆ.
ಪ್ರಕರಣದಲ್ಲಿ ಕೆಲವರು ಬಂಧನವಾಗಿದ್ದು, ಸಮಗ್ರವಾದ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಛೋಟಾ ಮುಂಬೈ ಮೊದಲಿಂದಲೂ ನಕಲಿ ಸರಾಯಿಗೆ ಹೆಸರು ವಾಸಿಯಾಗಿತ್ತು. ಇದೀಗ ಸ್ಪಿರಿಟ್ ಸಿಕ್ಕಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಎಸ್ಪಿ ಗುಂಜನ ಆರ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.
