ಗರಗದ ಗುಂಡಿಯಲ್ಲಿ ಹುಚ್ಚೆದ್ದ ಕೆಲವರಿಂದ ‘ಮೊಬೈಲ್ ಟಾರ್ಜ’ನಿಂದ ಸುರಂಗದ ಹುಡುಕಾಟ..!

ಧಾರವಾಡ: ತಾಲೂಕಿನ ಗರಗ ಗ್ರಾಮದ ಪೊಲೀಸ್ ಠಾಣೆಯ ಸಮೀಪದಲ್ಲೇ ನಡು ರಸ್ತೆಯಲ್ಲೇ ಗುಂಡಿಯೊಂದು ಬಿದ್ದಿದ್ದು, ಜನರು ಹುಚ್ಚೆದ್ದು ನೋಡುತ್ತಿದ್ದು, ಕಂಡ ಕಂಡವರು ಕಥೆಯೊಂದನ್ನ ಸೃಷ್ಠಿ ಮಾಡುತ್ತಿದ್ದಾರೆ.
ಗರಗದ ಪ್ರಮುಖ ಸ್ಥಳದಲ್ಲಿಯೇ ಗುಂಡಿಯೊಂದು ಬಿದ್ದಿರುವುದು, ಅದು ಮೊದಲು ರೈತರು ಬಳಕೆ ಮಾಡುತ್ತಿದ್ದ ಹಗೆ ಇರಬಹುದೆಂದು ಹೇಳಲಾಗುತ್ತಿದೆ. ಆದರೆ, ಕೆಲವು ಶಾಣ್ಯಾ ಜನರು ಕೈಯಲ್ಲಿ ಮೊಬೈಲ್ ಟಾರ್ಚ್ ಹಿಡಿದು, ನೋಡ್ರಲ್ಲಿ ಎಡಗಡೆ ಸುರಂಗ ಐತೀ, ಬಲಗಡೆ ಹೊಳ್ಳಿ ನೋಡ್ರೀ ಅಲ್ಯೂ ಸುರಂಗ ಕಾಣಾಕತ್ತೈತಿ ಎಂದು ಕಥೆಗಳನ್ನ ಕಟ್ಟುತ್ತಿರುವುದು ಜನರು ಮತ್ತಷ್ಟು ಜಮಾವಣೆ ಆಗುತ್ತಿದ್ದಾರೆ.
ವದಂತಿಗಳ ಮಹಾಪೂರವೇ ಹೆಚ್ಚಾಗಿದ್ದರಿಂದ ಸುಳ್ಳನ್ನೇ ನಂಬುವವರು ವ್ಯವಸ್ಥೆಯಲ್ಲಿ ಹೆಚ್ಚು ಜನರಿರುವುದರಿಂದ ನಾ ಮುಂದೆ.. ತಾ ಮುಂದೆ ಎನ್ನುವಂತೆ ಸುರಂಗ ಕಂಡು ಹಿಡಿಯಲು ನಿಂತು ಬಿಟ್ಟಿದ್ದಾರೆ.
ಜನರ ದಟ್ಟಣೆ ಹೆಚ್ಚಾಗುತ್ತಿದ್ದರಿಂದ ಪೊಲೀಸರು ಸುತ್ತಲೂ ಜನರು ಬಾರದೇ ಇರುವಂತೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಿಂದ ಹೆಚ್ಚುವರಿ ಬ್ಯಾರಿಕೇಡಗಳನ್ನ ತರಿಸಲಾಗುತ್ತಿದೆ ಎಂದು ಗೊತ್ತಾಗಿದೆ.